ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ 2020-21 ರ ಸಾಲಿನ ವಾರ್ಷಿಕ ಮಹಾಸಭೆಯು ಮಾ.4 ರಂದು ಕೆ.ವಿ.ಜಿ.ಮೆಡಿಕಲ್ ಕಾಲೇಜಿನಲ್ಲಿರುವ ಅಕಾಡೆಮಿ ಪ್ರಧಾನ ಕಾರ್ಯಾಲಯದಲ್ಲಿ ನಡೆಯಿತು. ಅಕಾಡೆಮಿ ಅಧ್ಯಕ್ಷ ಡಾ. ಕೆ. ವಿ. ಚಿದಾನಂದರವರು ಸಭೆಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ 2020-21ರ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಅನುಮೋದನೆ ಪಡೆಯಲಾಯಿತು. ನಂತರ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು
ನೂತನ ಅಧ್ಯಕ್ಷರಾಗಿ ಡಾ ಕೆ ವಿ ಚಿದಾನಂದರು ಪುನರಾಯ್ಕೆಯಾದರು. ಅಕಾಡೆಮಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ. ರೇಣುಕಾಪ್ರಸಾದ್ ಕೆ ವಿ ಯವರ ಬದಲಾಗಿ ಅಕ್ಷಯ್ ಕೆ ಸಿ. ಯವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಕೆ ವಿ ಹೇಮನಾಥ್ ಹಾಗೂ ಆಡಳಿತ ಸಮಿತಿ ಸದಸ್ಯರುಗಳಾಗಿ ಡಾ ರೇಣುಕಾಪ್ರಸಾದ್ ಕೆ ವಿ., ಶ್ರೀಮತಿ ಶೋಭಾ ಚಿದಾನಂದ, ಡಾ ಜ್ಯೋತಿ ಆರ್ ಪ್ರಸಾದ್, ಡಾ. ಅಭಿಜ್ಞಾ ಕೆ ಆರ್, ಡಾ. ಐಶ್ವರ್ಯ ಕೆ. ಸಿ. , ಡಾ. ಗೌತಮ್ ಗೌಡ ಎ.ಜಿ. ಆಯ್ಕೆಯಾದರು. ಸಭೆಯಲ್ಲಿ ಡಾ.ಕೆ ವಿ ಚಿದಾನಂದರು ಸ್ವಾಗತಿಸಿ, ಕೆ ವಿ ಹೇಮನಾಥ್ ವಂದಿಸಿದರು. ಈ ಸಮಿತಿಯು ಮುಂದಿನ ವಾರ್ಷಿಕ ಮಹಾಸಭೆ ತನಕ ಕಾರ್ಯನಿರ್ವಹಿಸಲಿದೆ ಎಂದು ಅಕಾಡೆಮಿಯ ನೂತನ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.