- Sunday
- April 20th, 2025

ಗುತ್ತಿಗಾರಿನ ಭಾರತ್ ಪೆಟ್ರೋಲ್ ಪಂಪ್ ಮುಂಭಾಗ ಅರುಣೋದಯ ಗ್ರೂಪ್ಸ್ ನ ಸಹಸಂಸ್ಥೆಯಾದ ಹೋಟೆಲ್ ಫನ್ ಟೈಮ್ ಜ. 8 ರಂದು ಶುಭಾರಂಭಗೊಂಡಿತು. ಇಲ್ಲಿ ಚಿಕನ್ ಟಿಕ್ಕ, ಅಲ್ ಫಹಾಮ್, ರೋಟಿ, ಶವರ್ಮ, ಚೈನೀಸ್, ಬಿರಿಯಾನಿ, ತಂದೂರಿ ಚಿಕನ್, ಊಟ, ವಿವಿಧ ಬಗೆಯ ಜ್ಯೂಸ್ ಹಾಗೂ ಐಸ್ ಕ್ರೀಂ ದೊರೆಯತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದಿನಾಂಕ 16-12-2021 ರಿಂದ ದಿನಾಂಕ 14-01-2022 ರವರೆಗೆ ದಿನನಿತ್ಯ ಪ್ರಾತಃಕಾಲ 5:00 ಗಂಟೆಗೆ ಧನುಪೂಜೆ ನಡೆಯಿತು. ದಿನಾಂಕ 14-01-2022 ರಂದು ಪ್ರಾತಃಕಾಲ 4:00 ಗಂಟೆಯಿಂದ ಉಧ್ಯಾಪನ ಧನುಪೂಜೆ ಹಾಗೂ ಮದ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ಹಾಗೂ ವನಭೋಜನ ನಡೆಯಿತು.ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ...

'ಯಕ್ಷಗಾನ,ರಂಗಭೂಮಿ,ನೃತ್ಯ,ಸಂಗೀತ,ಜಾದೂ,ಮಕ್ಕಳ ಶಿಬಿರ,ಚಿತ್ರಕಲೆ ಹೀಗೆ ಪ್ರತಿಯೊಂದು ಕಲೆಗೂ ವೇದಿಕೆ ನೀಡುತ್ತಿರುವ ರಂಗಮನೆಯು ಸಾಂಸ್ಕೃತಿಕವಾಗಿ ಬಹಳ ದೊಡ್ಡ ಕೊಡುಗೆ ನೀಡಿದ ಸಂಸ್ಥೆಯಾಗಿದೆ. ನಮ್ಮೆಲ್ಲರ ಸಹಕಾರ ಈ ಸಂಸ್ಥೆಗೆ ಬಹು ಮುಖ್ಯವಾಗಿದೆ ಎಂದು ಹಿರಿಯ ಕಲಾ ಪೋಷಕಿ ಶ್ರೀಮತಿ ಕಲಾವತಿ ವೆಂಕಟಕೃಷ್ಣಯ್ಯ ಹೇಳಿದರು.ಅವರು ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ ಶಾಸ್ತ್ರೀಯ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಹಾಬಲ-...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬಳ್ಪ ವಲಯ ಇದರ ವತಿಯಿಂದ ಶ್ರೀ ಧರ್ಮ ಶಾಸ್ತವು ಭಜನಾ ಮಂದಿರಕ್ಕೆ ಕಸದ ತೊಟ್ಟಿಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನೇತ್ರಾವತಿ ಹೊಪ್ಪಾಳೆ ವಿತರಿಸಿದರು.ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷರಾದ ಸುರೇಶ್ ಆಲ್ಕಬೆ,ಕಾರ್ಯದರ್ಶಿ ಮಿಥುನ್ ರಾಜ್ ಜತ್ತಿಲ,ಶ್ರೀ ಕ್ಷೇತ್ರ ಧ.ಗ್ರಾ.ಯೋ.ಶ್ರೀಮತಿ ಭವ್ಯ ಮತ್ತು ಭಜನಾ ಮಂದಿರದ ಪೂರ್ವಾಧ್ಯಕ್ಷರುಗಳು,ಸದಸ್ಯರು...

ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಸ್ಥೆಯ ನೂತನ ಅತ್ಯಾಧುನಿಕ ಮಣ್ಣು ಪರೀಕ್ಷಾ ಘಟಕವನ್ನು ಜ.14 ರಂದು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯರವರು ಪ್ರಸಕ್ತ ನಮ್ಮ ಕೃಷಿಕರು ತಮ್ಮ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಮಾಡಿ ಪೂರಕ ಸಾವಯವ ಗೊಬ್ಬರ ಬಳಕೆಯಂತಹ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ...

ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಜ.19 ರಿಂದ ಜ.25 ರವರೆಗೆ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಜ.15 ರಂದು ನಡೆಯಿತು. ಈ ಸಂದರ್ಭದಲ್ಲಿ ಮೊಗ್ರ ವೆಂಕಟ್ರಮಣ ಭಟ್, ಕಾರ್ಯಪ್ಪ ಗೌಡ ಚಿಕ್ಮುಳಿ, ಉಮೇಶ್ ಮಕ್ಕಿ ,ಚೆನ್ನಕೇಶವ ಕಮಿಲ, ದೊಡ್ಡಣ್ಣ ಗೌಡ ಚಿಕ್ಮುಳಿ,ಸೀತಾರಾಮ ಗೌಡ ಚಿಕ್ಮುಳಿ, ರಾಮಕೃಷ್ಣ ಗೌಡ...

ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜ.15 ರಂದು ಪ್ರಾತಃಕಾಲ 4:30 ಕ್ಕೆ ಭಕ್ತರ ಸಮ್ಮುಖದಲ್ಲಿ ಶ್ರೀ ಶಾಸ್ತವೇಶ್ವರ ಸನ್ನಿಧಾನದಲ್ಲಿ ಧನುಪೂಜೆ ಸಂಪನ್ನಗೊಂಡಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ದೇವಸ್ಥಾನದ ಅರ್ಚಕರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ಸುಬ್ರಹ್ಮಣ್ಯದ ಪದವಿ ಕಾಲೇಜಿನ ಎದುರು ಮುಖ್ಯರಸ್ತೆಯಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ನ ಸ್ಲಾಬ್ ಕುಸಿಯುವ ಹಂತದಲ್ಲಿದ್ದು ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟಂತಿದೆ. ಈ ಬಗ್ಗೆ ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ತುರ್ತು ಉಪಯೋಗಕ್ಕಾಗಿ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಂದ ದೇಣಿಗೆಯ ಮೂಲಕ ನಿಧಿ ಸಂಗ್ರಹಿಸಿ ಖರೀದಿಸಿದ ಆಂಬ್ಯುಲೆನ್ಸ್ ಯೋಜನೆ ಜ. 14 ರಂದು ಲೋಕಾರ್ಪಣೆ ಗೊಂಡಿತು. ಸುಳ್ಯ ಮೆಸ್ಕಾಂ ಎ ಇ ಇ ಹರೀಶ್ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ...

All posts loaded
No more posts