Ad Widget

ಕುಕ್ಕೆ : ಜವುಳಿ ಖಾತೆ ಸಚಿವ ಶಂಕರ ಪಾಟೀಲ ಭೇಟಿ – ಉಡುಪಿಯಲ್ಲಿ ಜವುಳಿ ಪಾರ್ಕ್ ಆರಂಭಿಸಲು ಚಿಂತನೆ

ಉಡುಪಿಯಲ್ಲಿ ಬೃಹತ್ ಜವುಳಿ ಪಾರ್ಕ್ ಅನ್ನು ನಿರ್ಮಾಣ ಮಾಡಲಾಗುವುದು. ಇಲ್ಲಿ ಬಾರೀ ಪ್ರಮಾಣದಲ್ಲಿ ಜವುಳಿ ಉದ್ದಿಮೆಯನ್ನು ಆರಂಭಿಸಲಾಗುವುದು. ಸುಮಾರು 20 ಎಕರೆ ಪ್ರದೇಶದಲ್ಲಿ ಶೀಘ್ರ ಜವುಳಿ ಪಾರ್ಕ್ ನಿರ್ಮಾಣಗೊಳ್ಳಲಿದೆ. ಈ ಮೂಲಕ ಸಹಸ್ರಾರು ಜನರಿಗೆ ಉದ್ಯೋಗವಕಾಶ ದೊರಯಲಿದೆ. ಜವುಳಿ ಪಾರ್ಕ್ ಮಾಡಲು ಬೇಕಾದ ಯೋಜನೆಗಳನ್ನು ಸಿದ್ದಪಡಿಸಲಾಗಿದ್ದು ಸರಕಾರ ಮಟ್ಟದಲ್ಲಿ ಆಗಬೇಕಾದ ನಿಯಮಗಳನ್ನು ಶೀಘ್ರ ರೂಪಿಸಿ ಶೀಘ್ರ...

ಐವರ್ನಾಡಿನಲ್ಲಿ ಕ್ಯಾಂಪ್ಕೋ ಸಂಸ್ಥೆಯ ಶಾಖೆ ತೆರೆದರೆ ರೈತರಿಗೆ ಪ್ರಯೋಜನ -ಎಸ್.ಎನ್.ಮನ್ಮಥ

ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಶಾಖೆಯನ್ನು ತೆರೆಯುವ ಬಗ್ಗೆ ಕೃಷಿಕರ ಸಭೆಯನ್ನು ಜ.1 ರಂದು ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ "ರೈತರು ಹಾಗೂ ಅಡಿಕೆ ಬೆಳೆಗಾರರ ಪರವಾಗಿ ಇರುವ ಕ್ಯಾಂಪ್ಕೋ ಸಂಸ್ಥೆಯ ಶಾಖೆಯನ್ನು ತೆರೆದರೆ ಇಲ್ಲಿಯ ಕೃಷಿಕರಿಗೆ ಪ್ರಯೋಜನವಾಗುತ್ತದೆ. ಈಗಾಗಲೇ ನಾವು...
Ad Widget

ಕುಕ್ಕೆ ಸುಬ್ರಹ್ಮಣ್ಯ : ವಿದ್ಯಾಸಾಗರ ತೀರ್ಥರು ಭೇಟಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಉಡುಪಿಯ ಕೃಷ್ಣಾಪುರ ಜನಾರ್ಧನ ತೀರ್ಥ ಸಂಸ್ಥಾನದ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಡಿ.31 ರ ಶುಕ್ರವಾರದಂದು ಭೇಟಿ ನೀಡಿ ದೇವರ ದರ್ಶನ ಪಡೆದರು.ಜ.18 ರಂದು ಶ್ರೀ ಕೃಷ್ಣ ಪರಮಾತ್ಮ ಮತ್ತು ಮುಖ್ಯಪ್ರಾಣ ದೇವರ ದ್ವೈವಾರ್ಷಿಕ ಪರ್ಯಾಯದ 50ನೇ ವರ್ಷದ ಪೂಜಾ ಪರ್ಯಾಯ ಮಹೋತ್ಸವ ಜರುಗಲಿದ್ದು, ಆ ಪ್ರಯುಕ್ತ ಶ್ರೀಪಾದರು...

ಕೊಲ್ಲಮೊಗ್ರು : ಪಡಿಕಲ್ಲು ಕಟ್ಟದ ನೀರಿಗೆ ಬಾಗಿನ ಅರ್ಪಣೆ

ಕೊಲ್ಲಮೊಗ್ರು ಗ್ರಾಮದ ಪಡಿಕಲ್ಲು ಎಂಬಲ್ಲಿ ಕಟ್ಟವನ್ನು ನಿರ್ಮಿಸಿ ಚಾಂತಾಳ ಮತ್ತು ಪಡಿಕಲ್ಲಿಗೆ ನೀರು ಹಾಯಿಸುವಂತಹ ವ್ಯವಸ್ಥೆಯನ್ನು ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ಇಟ್ಟು ನಾಲೆಯಲ್ಲಿ ತುಂಬಿದ್ದ ಹೂಳನ್ನು ಸ್ವಚ್ಛಗೊಳಿಸಿ ಹೂಳು ತುಂಬಿದಂತಹ ಎಲ್ಲಾ ಭಾಗವನ್ನು ಸ್ವಚ್ಛ ಮಾಡಿ ಕಟ್ಟೆ ಕಟ್ಟಿ ನೀರನ್ನು ರೈತರ ತೋಟಗಳಿಗೆ ಹಾಯಿಸುವಂತಹ...

ಒಂದು ತಿಂಗಳೊಳಗೆ ಪಾಲೆಪ್ಪಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಭರವಸೆ – ಹರೀಶ್ ಕಂಜಿಪಿಲಿ ; ಹೋರಾಟ ಸಮಿತಿಯ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ರಿಂದ ಪ್ರತಿಭಟನೆ ಹಿಂತೆಗೆತ

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಸಚಿವರ ವಿಶೇಷ ಅನುದಾನದಿಂದ ರೂ.30 ಲಕ್ಷ ಅನುದಾನ ಮಂಜೂರಾಗಿದ್ದು ಗುದ್ದಲಿ ಪೂಜೆಯು ಜ.1ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಶುಭಹಾರೈಸಿದರು. ಜ.3 ರಂದು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲು ರಸ್ತೆ ಹೋರಾಟ ಸಮಿತಿ ವತಿಯಿಂದ ಸಿದ್ಧತೆ ನಡೆಸಿತ್ತು. ಆದರೆ...

ಸಂತೋಷ್ ಮಡ್ತಿಲ ಸ್ಮರಣಾರ್ಥವಾಗಿ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ

ಸುಳ್ಯ: ದಿವಂಗತ ಸಂತೋಷ್ ಮಡ್ತಿಲ ಅಭಿಮಾನಿ ಬಳಗ ಸುಳ್ಯ ಇವರ ವತಿಯಿಂದ ಅವರ ಪ್ರಥಮ ವರ್ಷದ ಪುಣ್ಯತಿಥಿ ಕಾರ್ಯಕ್ರಮದ ಪ್ರಯುಕ್ತ ರಕ್ತದಾನ ಶಿಬಿರವನ್ನು ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸುಳ್ಯದ ಬ್ಲಡ್ ಬ್ಯಾಂಕ್ ನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ. ನೀಲಾಂಬಿಕೈ ನಟರಾಜನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು....

ಯೋಗೀಶ್ ಕುಮಾರ್ ಚೂಂತಾರು ನಿಧನ

ಅಮರಪಡ್ನೂರು ಗ್ರಾಮದ ದಿ.ಸತೀಶ್ ನಾಯ್ಕ ರವರ ಪುತ್ರ ಚೂಂತಾರು ಯೋಗೀಶ್ ಕುಮಾರ್ ಹೃದಯಾಘಾತದಿಂದ ಡಿ.31ರ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 22 ವರ್ಷ ವಯಸ್ಸಾಗಿತ್ತು. ಅವರಿಗೆ ಕಳೆದ ಡಿ.27ರಂದು ಹೃದಯ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ...

ಇಂದು(ಜ.01) ತಂಟೆಪ್ಪಾಡಿ ನಿನಾದದಲ್ಲಿ ಸಾಂಸ್ಕೃತಿಕ ನೆನಪು: ತಂಟೆಪ್ಪಾಡಿ ಶಂಭಟ್ಟರು ಹಾಗೂ ಯಕ್ಷಗಾನ ಶ್ರೀದೇವಿ ಮಹಾತ್ಮೆ

ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು(ಜ.01) 'ತಂಟೆಪ್ಪಾಡಿ ಶಂಭಟ್ಟರು' ಒಂದು ಸಾಂಸ್ಕೃತಿಕ ನೆನಪು ಹಾಗೂ ಪಾವಂಜೆ ಮೇಳದಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಲಿದೆ. ಸಂಜೆ 4.45ರಿಂದ ನಡೆಯಲಿರುವ 'ತಂಟೆಪ್ಪಾಡಿ ಶಂಭಟ್ಟರು' ಒಂದು ಸಾಂಸ್ಕೃತಿಕ ನೆನಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶ್ರೀಕೃಷ್ಣ ಚೊಕ್ಕಾಡಿ ವಹಿಸಲಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವರಾಮ ಭಟ್ ನಾಕೂರು 'ಶಂಭಟ್ಟರ...
error: Content is protected !!