ಸಂಪಾಜೆ ಗ್ರಾಮದ ಕಲ್ಲುಗುಂಡಿ ಬೆಂಜಮೀನ್ ಕಟ್ಟಡದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸಿ. ಎಸ್. ಸಿ ಸೆಂಟರ್ ಉದ್ಘಾಟನೆಗೊಂಡಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಉದ್ಘಾಟನೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಡಿಯಲ್ಲಿ ಉಚಿತ ಈ ಶ್ರಮ ಕಾರ್ಡ್ ನೀಡುವ ವ್ಯವಸ್ಥೆ ಹಾಗೂ ಇನ್ನಿತರ ಸರಕಾರದ ಸೌಲಭ್ಯಗಳಿಗೆ ನಿಗದಿ ಪಡಿಸದ ಹಣದೊಂದಿಗೆ ಸೌಲಭ್ಯ ಒದಗಿಸುವ ಮೂಲಕ ಶ್ರೀ ಕ್ಷೇತ್ರದ ಯೋಜನೆ ಹಾಗೂ ಜೊತೆಗೆ ವಿಪತ್ತು ನಿರ್ವಹಣಾ ತಂಡ ರಚನೆ ಮಾಡಿರುವುದಕ್ಕೆ ಗ್ರಾಮ ಪಂಚಾಯತ್ ಪರವಾಗಿ ಅಭಿನಂದನೆ ಸಲ್ಲಿಸಿದರು. ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ದೀಪ ಬೆಳಗಿಸಿ ಲ್ಯಾಪ್ ಟಾಪ್ ಹಸ್ತಾಂತರ ಮಾಡಿ ಸಂಘದ ಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಸದಸ್ಯ ಹನೀಫ್. ಎಸ್. ಕೆ. ಶುಭ ಹಾರೈಕೆ ಮಾಡಿದರು. ಸಂಪಾಜೆ ವಲಯ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ ಹಾಗೂ ಸೇವಾಪ್ರತಿನಿಧಿ ತಾರ, ಜಯಲಕ್ಷ್ಮಿ, ಸುಮಿತ್ರ , ಒಕ್ಕೂಟ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಜರಿದ್ದರು.
- Thursday
- November 21st, 2024