

ಕಲಾಮಾಯೆ (ರಿ.) ಏನೆಕಲ್ ಆಶ್ರಯದಲ್ಲಿ ನಡೆದ ಹತ್ತು ದಿನದ ಆನ್ಲೈನ್ ರಂಗ ಶಿಕ್ಷಣ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಜನವರಿ 30 ಭಾನುವಾರ ಶ್ರೀ ಆದಿಶಕ್ತಿ ಭಜನಾ ಮಂದಿರ ಏನೆಕಲ್ ಇಲ್ಲಿ ನಡೆಯಿತು.
ಕಲಾ ಪೋಷಕರು, ಧಾರ್ಮಿಕ ಮುಖಂಡರು, ಜ್ಯೋತಿಷ್ಯರಾದ ಪಂಡಿತ್ ಶ್ಯಾಮ್ ಸುಂದರ ಶಾಸ್ತ್ರೀ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿಗಳಾದ, ಸೋನ ಅಡ್ಕಾರು, ಹಾರ್ದಿಕ ಕೆರೆಕ್ಕೋಡಿ, ಪೂರ್ವಿತ್ ಐ. ಸಿ, ಪರೀಕ್ಷಿತಾ ಕಂಬಳ, ಸಾನ್ವಿ ದೊಡ್ಡಮನೆ, ರಮಿತಾ.ಪುರ. ಮರ್ಕಂಜ, ಸ್ವರ ಬಿಳಿಯಾರು, ಮನ್ವಿತಾ ಸುಳ್ಯ, ಧೀರಜ್ ಕೊಡಂಕೀರಿ, ಕೃತಿ ಆಲಂಕಾರ್, ವಿಕಾಸ್ ಪರಮಲೆ, ಚಿರಂತ್ ಪೂಜಾರಿ ಮನೆ, ಅನ್ವೇಶ್ ದೊಡ್ಡಮನೆ, ಶರದಿ ಉತ್ತಪ್ಪ, ರತನ್ ಉತ್ತಪ್ಪ, ಆಯುಷ್ ಉಡುಪಿ ಯಶಸ್ವಿ ಉಡುಪಿ, ಇಂಚರ ಸಂಪಾಜೆ, ಶ್ರೇಯಾ ಸುಳ್ಯ, ತನಿಶಾ ಚೊಕ್ಕಾಡಿ, ವಿಶ್ವದೀಪ್ ಕುಂದಲ್ಪಾಡಿ, ಕುಲದೀಪ್ ನಾವೂರು, ಛಾಯಾ ನಾವೂರು, ಅಶ್ವಿಜ್ ಅತ್ರೇಯ ಸುಳ್ಯ, ಸಾನ್ವಿ ಶೆಟ್ಟಿ, ಮಾನ್ವಿ ಶೆಟ್ಟಿ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ಸ್ವೀಕರಿಸಿದರು. ನಿರ್ದೇಶಕರಾದ ಸುಧೀರ್ ಏನೆಕಲ್, ಕಲಾವಿದರಾದ ರಾಮಚಂದ್ರ ಸುಬ್ರಮಣ್ಯ, ಪುಷ್ಪರಾಜ್ ಏನೆಕಲ್, ಹಾಗೂ ಪೋಷಕರು ಉಪಸ್ಥಿತರಿದ್ದರು.