Ad Widget

ಫೆ.03: ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನ್ನಿಧ್ಯದಲ್ಲಿ ವಾರ್ಷಿಕ ಕೋಲೋತ್ಸವ

ಬೆಳ್ಳಾರೆ ಗ್ರಾಮದ ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಘಂಟೆ ತೆಂಬೆರೆಯಲ್ಲಿ ಶ್ರೀ ಕೊರಗಜ್ಜ ದೈವದ ಕೋಲೋತ್ಸವವು ಫೆ.03 ಗುರುವಾರದಂದು ನಡೆಯಲಿದೆ.

ವಾರ್ಷಿಕ ಕೋಲೋತ್ಸವದ ಅಂಗವಾಗಿ ಸಂಜೆ ಗಂಟೆ 5.00ರಿಂದ ಭಜನಾ ಸಂಕೀರ್ತಣೆ, ಗಂಟೆ 6.00ಕ್ಕೆ ಕಲ್ಲುರ್ಟಿ-ಮಂತ್ರದೇವತೆ ಹಾಗೂ ಗುಳಿಗನಿಗೆ ಪರ್ವ ಮತ್ತು ಕಲ್ಲುರ್ಟಿ ದರ್ಶನ ಸೇವೆ ನಡೆಯಲಿದೆ.
ಗಂಟೆ 7.00ರಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಬಾಬು ಮೂಲ್ಯ ಕೊಂದಲ್ಕಾನ, ಉಮೇಶ್ ಶೆಟ್ಟಿ ಮಚ್ಚಾರಗುತ್ತು ಕಟೀಲು, ಕೃಷ್ಣಪ್ಪ ಮೂಲ್ಯ ಕೋಡಿಮನೆ ನೆಟ್ಟಾರು, ದೇರಣ್ಣ ಗೌಡ ಚಾವಡಿಬಾಗಿಲು ನೆಟ್ಟಾರು, ಶರತ್ ಮಡಿವಾಳ ಇವರುಗಳನ್ನು ಸನ್ಮಾನಿಸಲಾಗುವುದು. ಗಂಟೆ 8.00ಕ್ಕೆ ಅನ್ನದಾನ, ಗಂಟೆ 9.00ಕ್ಕೆ ಕೊರಗಜ್ಜ ದೈವದ ಕೋಲ, ಗಂಟೆ 10.00ಕ್ಕೆ ಪ್ರಸಾದ ವಿತರಣೆ ನಡೆಯಲಿರುವುದು. ಆ ಪ್ರಯುಕ್ತ ಭಕ್ತಾದಿಗಳಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಕೊರಗಜ್ಜನ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾಗುವಂತೆ ಕಿನ್ನಿಮಜಲು ಶ್ರೀಮತಿ ಪರಮೇಶ್ವರಿ ಕೃಷ್ಣಪ್ಪ ಮೂಲ್ಯ ಮತ್ತು ಮಕ್ಕಳು ವಿನಂತಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!