Ad Widget

ಫೆ.08 – ಫೆ 10: ಐವರ್ನಾಡು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.08 ರಿಂದ ಫೆ.10 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ 02 ರಂದು ಗೊನೆ ಕಡೆಯುವ ಕಾರ್ಯಕ್ರಮ ನಡೆಯಲಿದೆ. ಫೆ 08 ರಂದು ಬೆಳಿಗ್ಗೆ 8.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆದು 10 ಗಂಟೆಗೆ ಉಗ್ರಾಣ ತುಂಬಿಸುವುದು ಹಾಗೂ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿರುವುದು. ನಂತರ ರಾತ್ರಿ 7.30 ರಿಂದ ರಂಗಪೂಜೆಗಳು ನಡೆಯಲಿದೆ.
ಫೆ.09 ರಂದು ಬೆಳಿಗ್ಗೆ ಗಂಟೆ 9.00 ರಿಂದ ಶತರುದ್ರಾಭಿಷೇಕ,ಅಶ್ವಥನಾರಾಯಣ ಪೂಜೆ,108 ಕಾಯಿ
ಗಣಪತಿ ಹೋಮ ಹಾಗೂ ಗಂಟೆ 10.30 ರಿಂದ ಭಜನೆ,ನಂತರ ಕಲಶಾಭಿಷೇಕಗಳು ನಡೆದು ಪೂರ್ವಾಹ್ನ ಗಂಟೆ 12.30 ರಿಂದ ಮಹಾಪೂಜೆ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ. ನಂತರ ಸಂಜೆ 6 ಗಂಟೆಯಿಂದ ಶ್ರೀ ವಿಷ್ಣು ಸಹಸ್ರನಾಮ,ಲಲಿತ ಸಹಸ್ರನಾಮ ಪಾರಾಯಣ ಮುಗಿಸಿ, ರಾತ್ರಿ ಗಂಟೆ 7.00 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ ವಸಂತ ಕಟ್ಟೆ ಪೂಜೆ ನಡೆಯಲಿರುವುದು.
ಫೆ.10 ರಂದು ಬೆಳಗ್ಗೆ 8.30 ಕ್ಕೆ ಕೊಯಿಲ ಉಳ್ಳಾಕುಲು ದೈವಗಳ ಭಂಡಾರ ಬರುವುದು ಹಾಗೂ 9.30 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ,ಬಟ್ಟಲು ಕಾಣಿಕೆ,ಶುದ್ಧಿ ಕಲಶ ನಡೆದು, ರಾತ್ರಿ ಗಂಟೆ 6.00 ಕ್ಕೆ ಶ್ರೀ ವಿಷ್ಣು ಸಹಸ್ರನಾಮ,ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ. ಹಾಗೂ ಪೂರ್ವಾಹ್ನ ಗಂಟೆ 12.30 ಕ್ಕೆ ಮಹಾಪೂಜೆ ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 10.00 ರಿಂದ ದೈವಗಳ ನಡಾವಳಿ ನಡೆಯಲಿದೆ.
ಫೆ.8 ರಂದು ಸಂಜೆ 6.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ
ಉದ್ಘಾಟನೆ ನಡೆಯಲಿರುವುದು. ಈ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ಹಾಗೂ ಮುಖ್ಯ ಅತಿಥಿಗಳಾಗಿ ಸಚಿವ ಎಸ್.ಅಂಗಾರ ಹಾಗೂ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಂಜೆ ಗಂಟೆ 6.00 ರಿಂದ ಪೆರುಮಾಳ್ ಲಕ್ಷ್ಮಣ ಬಳಗದವರಿಂದ ಭಕ್ತಿ- ಗಾಯನ. ನಂತರ ರಾತ್ರಿ 8 ಗಂಟೆಯಿಂದ ರಿಂದ ಗೆಳೆಯರ ಬಳಗ ದೇರಾಜೆ ವತಿಯಿಂದ ಶ್ರೀ ಸಾಯಿ ಪುತ್ತೂರು ಅರ್ಪಿಸುವ ಬಲೆ ತೆಲಿಪಾಲೆ ತಂಡದವರಿಂದ ” ಮಕ್ಕರ್” ನಾನ್ ಸ್ಟೋಪ್ ಕಾಮಿಡಿ ಶೋ ನಡೆಯಲಿದೆ. ಹಾಗೆಯೇ ಫೆ. 9 ರಂದು ರಾತ್ರಿ ಗಂಟೆ 10.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಮತ್ತು ಗ್ರಾಮದ ವಿವಿಧ ಸಂಘ ಸಂಸ್ಥೆಗಳಿಂದ ನಡೆಯಲಿದೆ. ಫೆ.10 ರಂದು ಸಂಜೆ ಗಂಟೆ 7.00 ರಿಂದ ಯಕ್ಷಗಾನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ “ಚಕ್ರವ್ಯೂಹ – ಗಿರಿಜಾ ಕಲ್ಯಾಣ” ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading