ಜಾಲ್ಸೂರು ಬಾಲಾಜೆಯಲ್ಲಿ ಜ.24 ರಿಂದ ಜ.26 ರವರೆಗೆ ಶ್ರೀ ಧೂಮಾವತಿ ಮತ್ತು ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಅಸ್ರ ರವರ ನೇತೃತ್ವದಲ್ಲಿ 3 ದಿನಗಳ ಕಾಲ ನಡೆಯಿತು.
ಮೊದಲನೇ ದಿನವಾದ ದಿನಾಂಕ 24-01-2022ನೇ ಸೋಮವಾರದಂದು ಸಂಜೆ 5:00 ಗಂಟೆಗೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ವಾಸ್ತು ಪೂಜೆ, ರಕ್ಷೋಘ್ನ ಹೋಮ, ವಾಸ್ತು ಬಲಿ, ನೂತನ ಪೀಠಗಳ ಅಧಿವಾಸ ನಡೆಯಿತು.
ಎರಡನೇ ದಿನವಾದ 25-01-2022ನೇ ಮಂಗಳವಾರದಂದು ಬೆಳಿಗ್ಗೆ 7:00 ಗಂಟೆಯಿಂದ ಗಣಪತಿ ಹೋಮ, ಕನನಾದಿ ಸ್ಥಳ ಶುದ್ದಿ ನಡೆಯಿತು.
ನಂತರ ಸಂಜೆ 6:00 ಗಂಟೆಯಿಂದ ಕಲಶ ಪೂಜೆ, ಅಧಿವಾಸ ನಡೆಯಿತು.
ನಂತರ 3ನೇ ದಿನವಾದ 26-01-2022ನೇ ಬುಧವಾರ ಬೆಳಿಗ್ಗೆ 7:00 ಗಂಟೆಯಿಂದ ಗಣಪತಿ ಹೋಮ ಹಾಗೂ ಬೆಳಿಗ್ಗೆ ಕುಂಭ ಲಗ್ನದಲ್ಲಿ ಶ್ರೀ ಧೂಮಾವತಿ ಮತ್ತು ಗುಳಿಗ ದೈವದ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ನಿತ್ಯ ನಿಯಮ ನಿಶ್ಚಯ, ಪ್ರಸಾದ ವಿತರಣೆ ನಡೆಯಿತು.
ನಂತರ ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ ನಡೆಯಿತು.
ನಂತರ ಸಂಜೆ 6:00 ಗಂಟೆಯಿಂದ ದೈವಗಳ ಭಂಡಾರ ತೆಗೆದು ನಂತರ ಶ್ರೀ ಧೂಮಾವತಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು. ನಂತರ ಅನ್ನಸಂತರ್ಪಣೆ ನಡೆದು ಶ್ರೀ ಧೂಮಾವತಿ ಮತ್ತು ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವವು ಸಂಪನ್ನಗೊಂಡಿತು.
ವರದಿ :- ಉಲ್ಲಾಸ್ ಕಜ್ಜೋಡಿ