Ad Widget

ಶಕ್ತಿ ಕೇಂದ್ರಗಳ ಅಭಿವೃದ್ಧಿಯಿಂದ ಧರ್ಮ ರಕ್ಷಣೆ : ರವೀಶ ತಂತ್ರಿ

ಧರ್ಮ ಉಳಿಯಬೇಕಾದರೆ ಶಕ್ತಿ ಕೇಂದ್ರಗಳು ಅಭಿವೃದ್ಧಿ ಆಗಬೇಕು. ಶಕ್ತಿ ಕೇಂದ್ರಗಳ ಆಭಿವೃದ್ಧಿಯಿಂದ ಧರ್ಮ ರಕ್ಷಣೆ ಸಾಧ್ಯ. ಅದಕ್ಕಾಗಿ ಸಮಾಜ ಒಗ್ಗಟ್ಟಾಗಿ ಇರಬೇಕು ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.

. . . . . . .

ಮಂಡೆಕೋಲು ಪೆರಜದ ಶ್ರೀ ವನ ಶಾಸ್ತಾರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ದೈವಿಕ ಚೈತನ್ಯ ಒಂದು ಶಕ್ತಿ. ಅದನ್ನು ನಾವು ನಮಗೆ ಬೇಕಾದ ಹಾಗೆ ಆರಾಧಿಸಿಕೊಂಡು ಬರುತ್ತಿದ್ದೇವೆ. ದೈವಿಕ ಶಕ್ತಿ ಆರಾಧನೆಗಳು ಮೂಢನಂಬಿಕೆ ಅಲ್ಲ. ಧರ್ಮದ ಒಳಿತಿಗಾಗಿ, ರಕ್ಷಣೆಗಾಗಿ ಕ್ಷೇತ್ರಗಳು ಬೆಳೆದು ಬಂದವು. ಸ್ಪಷ್ಟ ಉದ್ದೇಶ ಇಟ್ಟುಕೊಂಡೇ ನಮ್ಮ ಪೂರ್ವಿಕರು ಮೂರ್ತಿ ಆರಾಧನೆಯನ್ನು ನಡೆಸಿಕೊಂಡು ಬಂದರು. ಇಂತಹಾ ಪವಿತ್ರ ಕಾರ್ಯವನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ಅದನ್ನು ಇತರರು ಅಪಹಾಸ್ಯ ಮಾಡಲು ಅವಕಾಶ ನೀಡಬಾರದು ಎಂದು ಹೇಳಿದರು.

ಸನಾತನ ಧರ್ಮವನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ಆದರೆ ನಾವು ಯಾರಿಗೂ ಹೆದರಿ ಸನಾತನ ಧರ್ಮದ ರಕ್ಷಣೆಯಿಂದ ಹಿಂದಕ್ಕೆ ಸರಿಯಬಾತದು. ಧರ್ಮ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು. ಅದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.

ಕ್ಷೇತ್ರದ ಮೊಕ್ತೇಸರ ಎಂ.ವೇಣುಗೋಪಾಲ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಪರಿವರ್ತನೆ ಆಗುತ್ತಿದೆ. ಧರ್ಮ ರಕ್ಷಣೆ ಬಗ್ಗೆ ಸಾಮಾನ್ಯ ಜನರಲ್ಲೂ ಜಾಗೃತಿ ಮೂಡುತ್ತಿದೆ. ಅದಕ್ಕಾಗಿಯೇ ಜೀರ್ಣಾವಸ್ಥೆಯಲ್ಲಿದ್ದ ಅನೇಕ ದೇವಸ್ಥಾನಗಳು ಜೀರ್ಣೋದ್ಧಾರ ಆಗುತ್ತಿದೆ. ಊರಿನ ಕ್ಷೇತ್ರಗಳು ಅಭಿವೃದ್ಧಿ ಆದರೆ ಕುಗ್ರಾಮಗಳು ಅಭಿವೃದ್ಧಿ ಆದಂತೆ. ಅಭಿವೃದ್ಧಿ ಆದ ಕ್ಷೇತ್ರಗಳನ್ನು ಊರಿನ ಜನ ನಮ್ಮ ಕ್ಷೇತ್ರ ಎಂಬ ಶ್ರದ್ಧೆಯಿಂದ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಪೆರಜ ಶ್ರೀ ವನಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಉಗ್ರಾಣಿಮನೆ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರವೀಂದ್ರ ಆಚಾರ್ಯ ಚೆನ್ನೈ ಸ್ವಾಗತಿಸಿದರು. ಸಂತೋಷ್ ಆಚಾರ್ಯ ವಂದಿಸಿದರು. ಸುರೇಶ್ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!