ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ “ಅಯ್ಯನಕಟ್ಟೆ ಜಾತ್ರೆ” ಜ.26 ಬುಧವಾರದಿಂದ ಜ.29 ಶನಿವಾರದ ವರೆಗೆ ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಜ.26ರಂದು ಬೆಳಗ್ಗೆ 9.30ರಿಂದ ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸಾನ್ನಿಧ್ಯದಲ್ಲಿ ವಿಶೇಷ ತಂಬಿಲ ಸೇವೆ, ನಾಗತಂಬಿಲ ನಡೆಯಲಿದೆ.
ಬೆಳಗ್ಗೆ 11.00ರಿಂದ ಬಾಳಿಲ ಗ್ರಾಮದ ಮೂರುಕಲ್ಲಡ್ಕದಲ್ಲಿ ನಾಗತಂಬಿಲ, ಮಧ್ಯಾಹ್ನ 1.00ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಜ.27ರಂದು ಮೂರುಕಲ್ಲಡ್ಕದಲ್ಲಿ ಬೆಳಗ್ಗೆ 8.30ರಿಂದ ಮಹಾಗಣಪತಿ ಹವನ ಸಹಿತ ಚಂಡಿಕಾ ಹವನ ಮತ್ತು ದುರ್ಗಾಪೂಜೆ, ಶ್ರೀ ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಮಧ್ಯಾಹ್ನ 1.00ರಿಂದ ಅನ್ನಸಂತರ್ಪಣೆ ನೆರವೇರಲಿದೆ.
ಜ.28ರಂದು ಬೆಳಗ್ಗಿನ ಜಾವ 5.00ಕ್ಕೆ ಮೂರುಕಲ್ಲಡ್ಕದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ತೋಟದಮೂಲೆಯಿಂದ ರುದ್ರಚಾಮುಂಡಿ ದೈವಗಳ ಕಿರುವಾಲು ಹೊರಡುವುದು, ಬೆಳಗ್ಗೆ 7.00ರಿಂದ ಕಳಂಜ ಗ್ರಾಮದ ಕಲ್ಲಮಾಡದಲ್ಲಿ ಉಳ್ಳಾಕುಲು ಶ್ರೀ ಮುಡಿ ದೈವಗಳ ನೇಮ, ಗಂಧಪ್ರಸಾದ ವಿತರಣೆ, ಮಧ್ಯಾಹ್ನ 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಜ.29ರಂದು ಬೆಳಗ್ಗೆ 7.30ಕ್ಕೆ ತಂಟೆಪ್ಪಾಡಿಯಿಂದ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಭಂಡಾರ ಹೊರಡುವುದು, ಬೆಳಗ್ಗೆ 8.00ಕ್ಕೆ ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡಲಿದೆ. ಬಳಿಕ ಬೆಳಗ್ಗೆ 10.00ಕ್ಕೆ ಕಲ್ಲಮಾಡದ ಬಳಿ ಶಿರಾಡಿ, ಧೂಮಾವತಿ ಹಾಗೂ ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆದು ಮಧ್ಯಾಹ್ನ 1.00ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ಅಪರಾಹ್ನ 2.30ಕ್ಕೆ ಕಲ್ಲಮಾಡದ ಬಳಿ ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವ, ಸಂಜೆ 5.00ರಿಂದ ಕಲ್ಲಮಾಡದಿಂದ ತಂಬಿನಮಕ್ಕಿವರೆಗೆ ಮಾರಿ ಹೊರಡಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ.27ರಂದು ಮೂರುಕಲ್ಲಡ್ಕದಲ್ಲಿ ಸಂಜೆ 6.30ರಿಂದ 10.00ರ ವರೆಗೆ ‘ಕನ್ನಡ ಕೋಗಿಲೆ’ ಖ್ಯಾತಿಯ ಶ್ರೀಮತಿ ಕಲಾವತಿ ದಯಾನಂದ ಅವರ ಕಲಾವಿದರು ಸಂಗೀತ ಬಳಗ ಉಡುಪಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಜ.28ರಂದು ಸಂಜೆ 7.00ರಿಂದ 10.00ರ ವರೆಗೆ ಯಕ್ಷಧ್ರುವ ಶ್ರೀ ಪಟ್ಲ ಸತೀಶ ಶೆಟ್ಟಿ ನೇತೃತ್ವದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಜ.28ರಂದು ಸಂಜೆ 6.00 ರಿಂದ 7.00ರವರೆಗೆ ಮೂರುಕಲ್ಲಡ್ಕದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಸುಭಾಶ್ಚಂದ್ರ ಕಳಂಜ ಸೇವಾ ಪ್ರಮುಖ್, ರಾ.ಸ್ವ.ಸೇ.ಸಂಘ ಮಂಗಳೂರು ವಿಭಾಗ ಶುಭಾಶಂಸನೆಗೈಯಲಿದ್ದಾರೆ. ಅಭ್ಯಾಗತರಾಗಿ ಶ್ರೀ ಜಗನ್ನಾಥ ರೈ ಬಿ ಸಹಕಾರ ಪೊಲೀಸು ಆಯುಕ್ತರು, ಕೇಂದ್ರ ಅಪರಾಧ ವಿಭಾಗ, ಬೆಂಗಳೂರು, ಅತಿಥಿಗಳಾಗಿ ಶ್ರೀ ಆಂಜನೇಯ ರೆಡ್ಡಿ ಆರಕ್ಷಕ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸು ಠಾಣೆ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ಕಾರ್ಯಗಳಲ್ಲಿ ಭಗವದ್ಭಕ್ತರು ಭಾಗಿಗಳಾಗಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.