
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಳಿಲ-ಮುಪ್ಪೇರಿಯ ಒಕ್ಕೂಟದ ಸದಸ್ಯರಿಂದ ಜ.23ರಂದು ಅಯ್ಯನಕಟ್ಟೆಯ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕ ಇಲ್ಲಿ ಶ್ರಮದಾನ ನಡೆಸಲಾಯಿತು. ಶ್ರಮದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತ ಯತೀಶ್. ಕೆ, ಒಕ್ಕೂಟದ ಅಧ್ಯಕ್ಷರಾದ ವೆಂಕಪ್ಪ ನಾಯ್ಕ ಪೋಸೋಡು, ಬಾಳಿಲ ಒಕ್ಕೂಟದ ಸೇವಾ ಪ್ರತಿನಿಧಿ ಹಾಗೂ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದರು.