Ad Widget

ವಿಜೃಂಭಣೆಯಿಂದ ಜರುಗಿದ ಪೆರುವಾಜೆ ಶ್ರೀ ಜಲದುರ್ಗಾದೇವಿ ವಾರ್ಷಿಕ ಜಾತ್ರಾ ಮಹೋತ್ಸವ

ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ.16ರಿಂದ ಜ.21ರವರೆಗೆ ವಿಜೃಂಭಣೆಯಿಂದ ಜರುಗಿತು. ಜಾತ್ರೋತ್ಸವದ ಅಂಗವಾಗಿ ಜ.16ರಂದು ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ದೇವತಾ ಪ್ರಾರ್ಥನೆ, ಧ್ವಜಾರೋಹಣ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ ನಡೆಯಿತು. ಜ.17ರಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ನೃತ್ಯ ಬಲಿ ನೆರವೇರಿತು. ಜ.18ರಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಉಳ್ಳಾಕುಲು ದೈವದ ಭಂಡಾರ ಬರುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ದೀಪೋತ್ಸವ, ವಸಂತಕಟ್ಟೆ ಪೂಜೆ ಜರುಗಿತು. ಈ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ಶ್ರೀಹರಿ ದರ್ಶನ, ಶ್ರೀನಿವಾಸ ಕಲ್ಯಾಣ ಪ್ರದರ್ಶನಗೊಂಡಿತು. ಜ.19 ಬುಧವಾರ ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಪೇಟೆ ಸವಾರಿ, ಬೆಡಿ ಕಟ್ಟೆಯಲ್ಲಿ ಸಿಡಿಮದ್ದು ಪ್ರದರ್ಶನ ಬಳಿಕ ರಾತ್ರಿ ಮಹಾಪೂಜೆ ನಂತರ ಶ್ರೀ ದೇವರ ಬಲಿ ಹೊರಟು, ಶ್ರೀ ಭೂತ ಬಲಿ ಉತ್ಸವ, ಶಯನೋತ್ಸವ, ಕವಾಟ ಬಂಧನ ಕಾರ್ಯಕ್ರಮ ನಡೆಯಿತು. ಜ.20ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಶ್ರೀ ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ತುಲಾಭಾರ ಸೇವೆ, ಯಾತ್ರಾ ಹೋಮ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಕಟ್ಟೆಪೂಜೆ, ಅವಭೃತ ಸ್ನಾನ, ಧ್ವಜಾರೋಹಣ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಉಳ್ಳಾಕುಲು, ಮೈಷಂತಾಯ ದೈವದ ಭಂಡಾರ ತೆಗೆಯಲಾಯಿತು.

. . . . .


ಜ.21 ಶುಕ್ರವಾರದಂದು ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶಪೂಜೆ ನಡೆದು ಉಳ್ಳಾಕುಲು ಮತ್ತು ಮೈಷಂತಾಯ ದೈವಗಳ ನೇಮೋತ್ಸವ ನಡೆಯಿತು. ನಂತರ ಪ್ರಸಾದ ವಿತರಣೆ, ಪಿಲಿಭೂತದ ಭಂಡಾರ ತೆಗೆಯುವುದು, ಮಧ್ಯಾಹ್ನ ಶ್ರೀ ದೇವರಿಗೆ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಬಳಿಕ ಅಪರಾಹ್ನ ಪಿಲಿಭೂತದ ನೇಮೋತ್ಸವ ನಡೆಯಿತು. ರಾತ್ರಿ ಶ್ರೀ ಕಲ್ಲುರ್ಟಿ ದೈವದ ನೇಮ, ಪ್ರಸಾದ ವಿತರಣೆ ನಡೆಯವುದರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪಿ. ಪದ್ಮನಾಭ ಶೆಟ್ಟಿ, ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ ಕುಮಾರಮಂಗಲ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ
ಶ್ರೀನಿವಾಸ ಹೆಬ್ಬಾರ್, ಪಿ.ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ.ಬಿ, ಪಿ.ಜಗನ್ನಾಥ ರೈ, ದಾಮೋದರ ನಾಯ್ಕ, ನಾರಾಯಣ.ಕೆ, ಶ್ರೀಮತಿ ಭಾಗ್ಯಲಕ್ಷ್ಮೀ, ಶ್ರೀಮತಿ ಯಶೋಧ.ಎ.ಎಸ್ ಮತ್ತು ದೇವಸ್ಥಾನದ ಮ್ಯಾನೇಜರ್ ವಸಂತ ಪೆರುವಾಜೆ ಹಾಗೂ ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!