ದೂರ ಇನ್ನು ದೂರ ಹೊರಟೆ ನಾನು ಎಲ್ಲ ತೊರೆದು…
ಭಾರ ಬದುಕು ಭಾರ ವಿಧಿಯ ಆಟ ತುಂಬಾ ಕ್ರೂರ…
ಸಾವು – ನೋವ ನಡುವೆ ಬದುಕು ತುಂಬಾ ಘೋರ…
ಮನದ ಒಳಗೆ ಸುಟ್ಟು ಹೋದ ನೆನಪೇ ಭಾರ, ಆ ನೆನಪೇ ಭಾರ…
ಕಳೆದು ಹೋದ ಖುಷಿಯ ಕ್ಷಣವು ಮರಳಿ ಎಂದೂ ಬಾರದು, ನನ್ನ ನೋವನೆಂದೂ ಮರೆಸದು…
ಬೀಸಿ ಬರುವ ಅಲೆಯ ಎದುರು ಬದುಕು ಎಂದೂ ಸಾಗದು, ಸಾಗಿ ಗುರಿಯನೆಂದೂ ಸೇರದು…
ಸಾವಿರಾರು ಜನರ ಮಧ್ಯೆ ಒಂಟಿಯಾದ ಭಾವನೆ, ನಾ ಒಂಟಿಯಾದ ಭಾವನೆ…
ದೂರ ಇನ್ನು ದೂರ ಹೊರಟೆ ನಾನು ಎಲ್ಲ ತೊರೆದು…
ಬಿದ್ದು ಹೋದ ಬದುಕು ನನ್ನದು, ಮತ್ತೇ ಎದ್ದು ನಿಲ್ಲದು, ಎಂದೂ ಗೆದ್ದು ಭೀಗದು…
ಜೊತೆಗೆ ಇದ್ದ ಜನರನೆಲ್ಲಾ ಬಿಟ್ಟು ನಾನು ಹೊರಟೆನು…
ಮತ್ತೆ ಎಂದೂ ಮರಳಿ ನಾನು ಹಿಂತಿರುಗಿ ಬಾರೆನು…
ಎಂದೂ ಮುಗಿಯದ ತೀರಕೆ ನನ್ನ ಈ ಪಯಣವು, ಏಕಾಂಗಿ ಪಯಣವು…
ಸಾಗುತಿರಲಿ, ಸಾಗುತಿರಲಿ ನನ್ನ ಏಕಾಂಗಿ ಪಯಣವು ಸಾಗಲಿ…
ದೂರ ಇನ್ನು ದೂರ ಹೊರಟೆ ನಾನು ಎಲ್ಲ ತೊರೆದು…
ಭಾರ ಬದುಕು ಭಾರ ವಿಧಿಯ ಆಟ ತುಂಬಾ ಕ್ರೂರ…
ಸಾವು – ನೋವ ನಡುವೆ ಬದುಕು ತುಂಬಾ ಘೋರ…
ಸಾಗುತಿರಲಿ ಈ ಪಯಣ ಎಂದೂ ಮುಗಿಯದ ತೀರಕೆ, ತಿರುಗಿ ಬಾರದ ಲೋಕಕೆ…
✍ಉಲ್ಲಾಸ್ ಕಜ್ಜೋಡಿ