ನಾಲ್ಕೂರು ಗ್ರಾಮದ ಕಲ್ಲಾಜೆ ಹಲ್ಗುಜಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಜ.15 ರಂದು ಹಾಗೂ ಜ.16 ರಂದು ದೈವಗಳ ನೇಮೋತ್ಸವ ನಡೆಯಿತು. ಬ್ರಹ್ಮರ್ಷಿ ಶ್ರೀ ವೇದಮೂರ್ತಿ ನೀಲೇಶ್ವರ ದಾಮೋದರ ತಂತ್ರಿ, ದೈವಜ್ಞರಾದ ಶಶಿಧರನ್ ಮಾಂಗಾಡ್ ಮತ್ತು ಕೆ.ರಾಜೇಶ್ ಎರಿಯ ಹಾಗೂ ವಾಸ್ತು ಶಿಲ್ಪಿ ಮರ್ಕಂಜದ ವೆಂಕಟ್ರಮಣ ಆಚಾರಿಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.
ಜ.13ರಂದು ಮೊದಲ್ಗೊಂಡು ಶ್ರೀ ಮಹಾವಿಷ್ಣು ಸಿಂಗಾರಿ ಮೇಳ
ಬಾಳಿಲ ಮುಪ್ಪೇರ್ಯ ಇವರ ವಿಶೇಷ ಆಕರ್ಷಣೆಯೊಂದಿಗೆ ನಡುಗಲ್ಲಿನಿಂದ ಹಲ್ಗುಜಿ ಕಲ್ಲಾಜೆ ಶ್ರೀ ಶಿರಾಡಿ ದೈವಸ್ಥಾನಕ್ಕೆ ಹಸಿರುವಾಣಿ ಮೆರವಣಿಗೆ ವೈಭವದಿಂದ ನಡೆಯಿತು. ಸಂಜೆ ಆಗಮಿಸಿದ ತಂತ್ರಗಳಿಗೆ ಪೂರ್ಣಕುಂಭ ಸ್ವಾಗತ ನಡೆಯಿತು. ನಂತರ ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಪಶುದ್ಧಹಃ ಪುಣ್ಯಾಹ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ಜಲಾಧಿವಾಸ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಜ.14 ರಂದು ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಬಿಂಬಶುದ್ಧಿ, ಕಲಶಪೂಜೆ ಮತ್ತು ಕಲಶಾಭಿಷೇಕ, ಕನನಾದಿ ಸ್ಥಳ ಶುದ್ದಿ, ಅನುಜ್ಞಾ ಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯೆ ಪೂಜೆ, ಮೂಲಸ್ಥಾನ ಮತ್ತು ಪಾದಸ್ಪರ್ಶ ಸ್ಥಳದಿಂದ ಆಹ್ವಾಣೆ, ಅನುಜ್ಞಾಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ಜೀವ ಆಹ್ವಾಣೆ, ಜೀವ
ಕಲಶ, ಶಯ್ಯೆ ಆಗಮನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಅಧಿವಾಸ ಹೋಮ, ಕಲಶಪೂಜೆ, ಜಲೋದ್ಧಾರಧ್ಯಾನಾಧಿವಾಸ ಶಯ್ಯೆ ಪೂಜೆ, ತ್ರಿಕಾಲ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು
ಜ. 15 ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ , ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ದೈವಗಳಿಗೆ ತಂಬಿಲ, ಮಹಾಪೂಜೆ, ಹಾಗೂ ನಿತ್ಯ ನಿಯಮಗಳ ನಿಶ್ಚಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನೆರವೇರಿತು. ಜ.16 ರಂದು ಬೆಳಿಗ್ಗೆ ಶ್ರೀ ಶಿರಾಡಿ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಂತರ ಅಗ್ನಿಗುಳಿಗ ದೈವದ ನೇಮೋತ್ಸವ ನಡೆಯಿತು. ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಲಕ್ಕಿ ಕೂಪನ್ ಡ್ರಾ ನಡೆಯಿತು. ಜ.15 ರಂದು ರಾತ್ರಿ ಯಕ್ಷಗಾನ ಭಾರ್ಗವ ವಿಜಯ ಪ್ರದರ್ಶನಗೊಂಡಿತು.