
ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟ,
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ಸೇರಿದಂತೆ ನೂತನ ಒಕ್ಕೂಟ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಬಗ್ಗೆ ಸಭೆ ಜ.26 ರಂದು ಸುಳ್ಯ ಸಿ.ಎ.ಬ್ಯಾಂಕ್ ಸಭಾಭವನದಲ್ಲಿ ಪೂ.10 ಗಂಟೆಗೆ ನಡೆಯಲಿದೆ
ಅರೆಭಾಷೆ ರಂಗಭೂಮಿ, ಸಿನಿಮಾ, ಸಾಹಿತ್ಯ, ಸಾಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ದಕ್ಷಿಣ
ಕನ್ನಡ ಮತ್ತು ಕೊಡಗು ಜಿಲ್ಲಾ ಸರ್ವ ಕಲಾವಿದರ ಒಗ್ಗಟ್ಟಿನೊಂದಿಗೆ ಅರೆಭಾಷೆ ಭಾಷಾ ಬೆಳವಣಿಗೆ, ಕಲಾವಿದರ
ಶ್ರೇಯೋಭಿವೃದ್ಧಿ ಮತ್ತು ಅರೆಭಾಷೆ ಕಲಾವೈಭವವನ್ನು ಸಿರಿವಂತಿಕೆಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅರೆಭಾಷೆ
ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ. ಇದರ ನೂತನ ಸಮಿತಿ ರಚನೆ ಹಾಗೂ
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ನಡೆಯಲಿದ್ದು, ಅರೆಭಾಷೆ ಕ್ಷೇತ್ರದ ಎಲ್ಲಾ ಹಿರಿಯ ಕಲಾವಿದರು ಮತ್ತು
ಯುವ ಕಲಾವಿದರು ಭಾಗವಹಿಸಿ ಕಲಾವಿದರ ಒಕ್ಕೂಟದ ಮುಂದಿನ ಬೆಳವಣಿಗೆ ಹಾಗೂ ಕಾರ್ಯಭಿವೃದ್ಧಿಗಾಗಿ
ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.
ಮಾಹಿತಿಗಾಗಿ : 9686714517 9019170432