Ad Widget

ಜ.13-16 : ಹಲ್ಗುಜಿ ಶಿರಾಡಿ ದೈವಸ್ಥಾನದ ಪುನರ್ ಪ್ರತಿಷ್ಠೆ- ನೇಮೋತ್ಸವ

ನಾಲ್ಕೂರು ಗ್ರಾಮದ ಕಲ್ಲಾಜೆ ಹಲ್ಗುಜಿ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಮತ್ತು ಪರಿವಾರ ದೈವಗಳ ದೇವಸ್ಥಾನದ ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿ ನಿಂತಿದೆ. ಜ.15 ನೇ ಶನಿವಾರ ದಿವಾ ಗಂಟೆ 10-31ರ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಶಿರಾಡಿ ದೈವ ಪುನರ್ ಪ್ರತಿಷ್ಠ ಕಲಾಶಾಭಿಷೇಕ ಪರಿವಾರ ದೈವಗಳ ಹಾಗೂ ದೈವಗಳ ನೇಮೋತ್ಸವವು ಬ್ರಹ್ಮರ್ಷಿ ಶ್ರೀ ವೇದಮೂರ್ತಿ ನೀಲೇಶ್ವರ ದಾಮೋಧರ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೈವಜ್ಞ ಶ್ರೀ ಶಶಿಧರನ್ ಮಾಂಗಾಡ್ ಹಾಗೂ ಶ್ರೀ ಕೆ.ರಾಜೇಶ್ ಎರಿಯ ಮತ್ತು ವಾಸ್ತು ಶಿಲ್ಪಿ ಮರ್ಕಂಜ ಶ್ರೀ ವೆಂಕಟ್ರಮಣ ಆಚಾರಿಯವರ ಮಾರ್ಗದರ್ಶನದಲ್ಲಿ ಜರುಗಲಿದೆ.

. . . . . . . . .


ಕಾರ್ಯಕ್ರಮಗಳು : ಜ.13 ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ
ಬಾಳಿಲ ಮುಪ್ಪೇರ್ಯ ಇವರ ವಿಶೇಷ ಆಕರ್ಷಣೆಯೊಂದಿಗೆ ನಡುಗಲ್ಲಿನಿಂದ ಹಲ್ಗುಜಿ ಕಲ್ಲಾಜೆ ಶ್ರೀ ಶಿರಾಡಿ ದೈವಸ್ಥಾನಕ್ಕೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ರಾತ್ರಿ ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಪಶುದ್ಧಹಃ ಪುಣ್ಯಾಹ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ಜಲಾಧಿವಾಸ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಜ.14 ರಂದು ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಬಿಂಬಶುದ್ಧಿ, ಕಲಶಪೂಜೆ ಮತ್ತು ಕಲಶಾಭಿಷೇಕ, ಕನನಾದಿ ಸ್ಥಳ ಶುದ್ದಿ, ಅನುಜ್ಞಾ ಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯೆ ಪೂಜೆ, ಮೂಲಸ್ಥಾನ ಮತ್ತು ಪಾದಸ್ಪರ್ಶ ಸ್ಥಳದಿಂದ ಆಹ್ವಾಣೆ, ಅನುಜ್ಞಾಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ಜೀವ ಆಹ್ವಾಣೆ, ಜೀವ
ಕಲಶ, ಶಯ್ಯೆ ಆಗಮನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಅಧಿವಾಸ ಹೋಮ, ಕಲಶಪೂಜೆ, ಜಲೋದ್ಧಾರಧ್ಯಾನಾಧಿವಾಸ ಶಯ್ಯೆ ಪೂಜೆ, ತ್ರಿಕಾಲ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

. . . . . . .

ಜ. 15 ಶನಿವಾರದಂದು ಬೆಳಿಗ್ಗೆ ಗಣಪತಿ ಹೋಮ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ ದಿವಾ ಗಂಟೆ 10-31ರ ಮೀನ ಲಗ್ನದ ಶುಭಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ದೈವಗಳಿಗೆ ತಂಬಿಲ, ಮಹಾಪೂಜೆ, ಹಾಗೂ ನಿತ್ಯ ನಿಯಮಗಳ ನಿಶ್ಚಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನೆರವೇರಲಿದೆ. ಜ.16 ರಂದು ಬೆಳಿಗ್ಗೆ ಶ್ರೀ ಶಿರಾಡಿ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಂತರಅಗ್ನಿಗುಳಿಗ ದೈವದ ನೇಮೋತ್ಸವ ನಡೆಯಲಿದೆ..


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading