Ad Widget

ಮೆಟ್ಟಿನಡ್ಕ : ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಒಕ್ಕೂಟದಿಂದ ಶಾಲಾ ಆವರಣ ಸ್ವಚ್ಛತೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆಟ್ಟಿನಡ್ಕ ಒಕ್ಕೂಟ ,
ಇದರ ಮಾಸಿಕ ಸಭೆ ಮತ್ತು ಕ್ಷೇತ್ರದ ವತಿಯಿಂದ ನಡೆಯುವ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಜ.9 ರಂದು ಕಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಡ್ಕ ,ಇದರ ಆವರಣದ ಸ್ವಚ್ಛತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮಾಹಿತಿ ಇರುವ ಕರಪತ್ರವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ರಮಾನಂದರ ಮೆಟ್ಟಿನಡ್ಕ ಬಿಡುಗಡೆಗೊಳಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಯೋಜನೆಯ ಸದಸ್ಯರು ಭಾಗವಹಿಸಿದ್ದರು. ಸೇವಾ ಪ್ರತಿನಿಧಿ ರಮೇಶ್ ಮೆಟ್ಟಿನಡ್ಕ ಮಾರ್ಗದರ್ಶನ ನೀಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!