ಸುಳ್ಯದಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾದ ಶ್ರೀರಾಮ್ ಪೇಟೆಯ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನೇಶ್ ಅಡ್ಕಾರ್ ಅವರ ಮಾಲಕತ್ವದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯು 30/08/1996 ರಂದು ಪ್ರಾರಂಭಗೊಂಡು ಕಳೆದ ವರ್ಷ 2021 ರಲ್ಲಿ 25 ವರ್ಷವನ್ನು ಪೂರೈಸಿ 26 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿದ್ದು ಇದರ ಅಂಗವಾಗಿ 2021 ನೇಯ ವರ್ಷದಲ್ಲಿ ಸುಮಾರು 5.5 ಲಕ್ಷ ರೂಪಾಯಿ ವೆಚ್ಚದ ವಿಶೇಷ ಯೋಜನೆಯೊಂದನ್ನು ಹಮ್ಮಿಕೊಂಡಿತ್ತು. ಈ ಯೋಜನೆಯ ಅನ್ವಯ ಪ್ರತೀ ತಿಂಗಳು 25 ಸಾವಿರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ವಿಜೇತರಿಗೆ ನೀಡಲಾಗುತ್ತಿತ್ತು. ಈ ಡ್ರಾ ದ ಕೊನೆಯ ಹಂತವಾದ ಬಂಪರ್ ಡ್ರಾ ಕಾರ್ಯಕ್ರಮವು ಜ.10 ರಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ, ಎ.ಒ.ಎಲ್.ಇ ಸುಳ್ಯ ಇದರ ಅದ್ಯಕ್ಷರಾದ ಡಾ.ಕೆ.ವಿ ಚಿದಾನಂದ, ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಡಾ.ಗಿರೀಶ್ ಭಾರದ್ವಾಜ್ ಹಾಗೂ ಶ್ರೀ ಹರಿ ಬಿಲ್ಡಿಂಗ್ ಸುಳ್ಯ ಇದರ ಮಾಲಕರಾದ ಕೃಷ್ಣ ಕಾಮತ್ ಇವರುಗಳ ಸಮ್ಮುಖದಲ್ಲಿ ನೆರವೇರಿತು.
ಈ ಬಂಪರ್ ಡ್ರಾ ದ ಪ್ರಥಮ ಬಹುಮಾನ 1 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಗಂಗಾಧರ ಐವರ್ನಾಡು ಇವರು ಪಡೆದುಕೊಂಡರು.
ದ್ವಿತೀಯ ಬಹುಮಾನ 50 ಸಾವಿರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಹರಿಪ್ರಿಯನ್ ಸುಳ್ಯ ಇವರು ಪಡೆದುಕೊಂಡರು.
ಹಾಗೂ ತೃತೀಯ ಬಹುಮಾನ ತಲಾ 10 ಸಾವಿರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು 10 ಜನ ವಿಜೇತರಿಗೆ ನೀಡಲಾಗಿದ್ದು, ಜಲಜಾಕ್ಷಿ ನೆಕ್ರಾಜೆ, ರಘುರಾಮ್ ಮಡಿಕೇರಿ, ಚೈತ್ರಾ ಬೆಳ್ಳಿಪ್ಪಾಡಿ, ಹರಿಶ್ಚಂದ್ರ ಅರೆಕಲ್ಲು ಸಂಪಾಜೆ, ಅಶೋಕ ಬೋಳುಗಲ್ಲು, ಹರ್ಷಿತ್ ನಡುಗಲ್ಲು ಮಧು ವೈನ್ಸ್, ಅಬ್ದುಲ್ ಖಾದರ್ ಕುಂಬರ್ಚೋಡು, ಐವನ್ ಸಬಾಸ್ಟಿನ್ ಗುತ್ತಿಗಾರು, ಸೌಮ್ಯ ಕೊಮ್ಮೆಮನೆ, ನರೇಶ್ ಕಾಂತಮಂಗಲ ಇವರುಗಳು ಪಡೆದುಕೊಂಡರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ಹಾಗೂ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ಮಾಲಕರಾದ ದಿನೇಶ್ ಅಡ್ಕಾರ್ ಮುಂತಾದವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ