
ಕ್ಷೇಮ ಮತ್ತು ಆರೋಗ್ಯ ಕೇಂದ್ರ ಸಂಪಾಜೆ,ವಿದ್ವಾಲ ಶೈಕ್ಷಣಿಕ ಗ್ರಾಮೀಣ ಅಭಿವೃದ್ಧಿ ಕೇಂದ್ರ ಬೆಂಗಳೂರು, ಉಪಕೇಂದ್ರ ಪೆರಾಜೆ ಇದರ ವತಿಯಿಂದ 15-18ವರ್ಷ ವಯಸ್ಸಿನ ಮಕ್ಕಳಿಗೆ ಕೋ- ವ್ಯಾಕ್ಸಿನ್ ಲಸಿಕಾ ಅಭಿಯಾನ ಪೆರಾಜೆ ಜ್ಯೋತಿ ಪ್ರೌಢ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ನಾಯಕ ಉದ್ಘಾಟಿಸಿದರು. ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ಹರೀಶ್ ಚಂದ್ರ ಮುಡ್ಕಜೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ
ಶಾಲಾ ಮುಖ್ಯೋಪಾಧ್ಯಾಯರಾದ ವೇಣುಗೋಪಾಲ,
ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಲಾ ಬಳ್ಳಡ್ಕ, ಉಪಾಧ್ಯಕ್ಷ ಜಯಲಕ್ಷೀ ಧರಣೀಧರ, ಸಿಆರ್ ಪಿ ರೇಖಾ ಅಡ್ಕ, ಅರೋಗ್ಯ ಕಾರ್ಯಕರ್ತೆ ಜಯಶ್ರೀ ಆಶಾಕಾರ್ಯಕರ್ತೆಯರಾದ ಪೂರ್ಣಾಕ್ಷಿ ಅಡ್ಕ, ಜಯಂತಿ ಕೋಡಿ, ತಾಲೂಕು ಶುಷ್ರುಣಾಧಿಕಾರಿ ದೇಚಮ್ಮ
ಮಡಿಕೇರಿ ಅರೋಗ್ಯ ಕೇಂದ್ರದ ಡಿಎಚ್ ಒ ಭವಾನಿ ಉಪಸ್ಥಿತರಿದ್ದರು. ನಂತರ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಯಿತು. ಶಿಕ್ಷಕರು, ಸಿಬ್ಬಂದಿ ವರ್ಗ ಸಹಕರಿಸಿದರು.