Ad Widget

ಸಹಕಾರಿ ಯೂನಿಯನ್ ನೂತನ ಕಾರ್ಯದರ್ಶಿಯಾಗಿ ವಾಸುದೇವ ನಾಯಕ್

ಸುಳ್ಯ ತಾಲೂಕು ಸಹಕಾರಿ ಯೂನಿಯನ್ ನಿ. ಇದರ ಗೌರವ ಕಾರ್ಯದರ್ಶಿ ವೆಂಕಟ್ರಮಣ ಮುಳ್ಯ ಇವರಿಗೆ ಬೀಳ್ಕೊಡುಗೆ ಹಾಗೂ ನೂತನ ಕಾರ್ಯದರ್ಶಿ ವಾಸುದೇವ ನಾಯಕ್ ಇವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸುಳ್ಯ ಸಿ ಎ ಬ್ಯಾಂಕ್ ನ ಎ.ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿಸಲಾಯಿತು. ವೆಂಕಟ್ರಮಣ ಮುಳ್ಯ ಇವರು ಕಳೆದ 18 ವರ್ಷಗಳಿಂದ ಸುಳ್ಯ ತಾಲ್ಲೂಕು ಸಹಕಾರ ಯೂನಿಯನ್ ನಿಯಮಿತ ಇದರ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಕೃತ ಸುಳ್ಯ ಸಿ ಎ ಬ್ಯಾಂಕ್ ಇದರ ಉಪಾಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಹಕಾರ ಯೂನಿಯನ್ ನ ಮುಂದಿನ ನೂತನ ಗೌರವ ಕಾರ್ಯದರ್ಶಿಯಾಗಿ ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಇವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ಸುಕನ್ಯಾ ರಾವ್ ಸುಳ್ಯ ಸಹಕಾರ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಮಾಜಿ ಅಧ್ಯಕ್ಷ ವಿಷ್ಣು ಭಟ್ ಮತ್ತು ಸಹಕಾರಿ ಯೂನಿಯನ್ ನಿರ್ದೇಶಕರು, ಡಿಸಿಸಿ ಬ್ಯಾಂಕ್ ಸುಳ್ಯ ಶಾಖಾ ವ್ಯವಸ್ಥಾಪಕರಾದ ವಿಶ್ವನಾಥ್, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕರು, ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ತಿತರಿದ್ದರು. ಶೈಲೇಶ್ ಅಂಬೆಕಲ್ಲು ನಿರೂಪಿಸಿದರು ವಿಷ್ಣು ಭಟ್ ವಂದನಾರ್ಪಣೆಗೈದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading