Ad Widget

ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಪಿಎಚ್.ಡಿ ಪದವಿ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಮಂಡಿಸಿದ ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ.
ಡಾ. ಕುಮಾರ ಸುಬ್ರಹ್ಮಣ್ಯ ಭಟ್. ಎ ಸಹಾಯಕ ಪ್ರಾಧ್ಯಾಪಕರು ಸಂಸ್ಕೃತ ವಿಭಾಗ ವಿಶ್ವವಿದ್ಯಾಲಯ ಕಾಲೇಜು ಇವರು ಮಾರ್ಗದರ್ಶಕರಾಗಿದ್ದಾರೆ.
ಈ ಮಹಾಪ್ರಬಂಧವು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜೀವಮಾನದ ಸಾಧನೆಯನ್ನು ಒಳಗೊಳ್ಳುವ ನೆಲೆಯಲ್ಲಿ ಶ್ರೀಮಠದ ಚಾರಿತ್ರಿಕ ವಿಚಾರವನ್ನು ಗುರುತಿಸುವ ಮೂಲಕ ನಾಥಪರಂಪರೆಯನ್ನು ಅವಲೋಕಿಸುತ್ತದೆ. ಮಹಾಸ್ವಾಮೀಜಿ ಅವರ ಕಾಲಮಾನದಲ್ಲಿನ ಶ್ರೀಮಠದ ಬೆಳವಣಿಗೆಯನ್ನು ಅಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಂಸ್ಕೃತ ಭಾಷೆ, ಸಾಹಿತ್ಯದ ಬೆಳವಣಿಗೆಯ ಅಭಿವ್ಯಕ್ತಿಯನ್ನು ಬಹುದೀರ್ಘವಾಗಿ ಚರ್ಚೆಗೆ ಒಳಗು ಮಾಡಿದ ಮಹತ್ವದ ಸಂಶೋಧನಾ ಗ್ರಂಥವಾಗಿದೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!