ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಂಜಿಕಾರು ತಿಮ್ಮಪ್ಪ ಎಂಬವರ ಮಗ ನಿಕ್ಷಿತ್ ರಿಗೆ ಮಂಜೂರಾದ ಮೂಲಭೂತ ಸೌಲಭ್ಯ ವಾತ್ಸಲ್ಯ ಕಿಟ್ ಅನ್ನು ಅರಂಬೂರು ಒಕ್ಕೂಟ ಉಪಾಧ್ಯಕ್ಷರಾದ ವಿಶ್ವನಾಥ್ ವಿತರಿಸಿದರು. ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ ಪ್ರತಿ ತಿಂಗಳು ಧರ್ಮಸ್ಥಳದಿಂದ 1000/- ಸಹಾಯಧನವನ್ನು ನೀಡಲಾಗುತ್ತಿದೆ. ಈ ಸಂದರ್ಭ ಸಂಪಾಜೆ ವಲಯ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ, ಸೇವಾಪ್ರತಿನಿಧಿ ವಿಜಯಶ್ರೀ ಹಾಗೂ ಮನೆಯವರು ಉಪಸ್ಥಿತರಿದ್ದರು.
- Wednesday
- December 4th, 2024