Ad Widget

ಮಣಿಮಜಲು ಜೈನ ಮನೆತನದ ಪಿ.ಗುಲಾಬಿಯಮ್ಮ ನಿಧನ

ಕಳಂಜ ಗ್ರಾಮದ ಮಣಿಮಜಲು ಜೈನ ಮನೆತನದ, ಪ್ರಸ್ತುತ
ಮೂಡುಬಿದಿರೆಯಲ್ಲಿ ನೆಲೆಸಿದ್ದ
ಪಿ ಗುಲಾಬಿಯಮ್ಮ ಜ.02ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು.

. . . . . . . . .

ಮೂಡುಬಿದಿರೆಯ ಜೈನ ಪೇಟೆ ಬಕ್ಕಾರು ಮನೆ ನಿವಾಸಿ ದಿ. ಎಂ ಮಿತ್ರ ಸೇನ ಶೆಟ್ಟಿ ಅವರ ಧರ್ಮಪತ್ನಿಯಾಗಿರುವ ಪಿ ಗುಲಾಬಿ ಅಮ್ಮನವರು ಓರ್ವ ಪುತ್ರ ,ಮೂವರು ಪುತ್ರಿಯರನ್ನು ಅಗಲಿದ್ದಾರೆ.

. . . . . . .

ಧಾರ್ಮಿಕವಾಗಿ ಸಕ್ರಿಯರಾಗಿದ್ದ ಅವರು ಸಮ್ಮೇದ ಶಿಖರ್ಜಿ ಸಹಿತ ಇತರ ತೀರ್ಥಕ್ಷೇತ್ರಗಳ ದರ್ಶನ ಮಾಡಿ ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.

ಕಳಂಜ ಗ್ರಾಮದ ಮಣಿಮಜಲಿನಲ್ಲಿ 2011ರಲ್ಲಿ ಇವರ ನೇತೃತ್ವದಲ್ಲಿ ನಾಗ ಪ್ರತಿಷ್ಠೆ ನೆರವೇರಿಸಲಾಗಿತ್ತು. ಅಲ್ಲದೇ ಪ್ರತೀ ವರ್ಷ ಮೇ ತಿಂಗಳಿನಲ್ಲಿ ಮಣಿಮಜಲಿನಲ್ಲಿ ಪಿಲಿಭೂತ ಹಾಗೂ ಇನ್ನಿತರ ದೈವಗಳ ಆರಾಧನೆ ಮತ್ತು ನಾಗಾರಾಧನೆ, ತಂಬಿಲಸೇವೆ ಇತ್ಯಾದಿ ದೇವತಾರಾಧನೆಗಳು ಇವರ ನೇತೃತ್ವದಲ್ಲಿ ನಡೆಯುತ್ತಿತ್ತು. ಜೀರ್ಣಾವಸ್ಥೆಯಲ್ಲಿದ್ದ ಬೆಳ್ಳಾರೆ ಗ್ರಾಮದ ಬಸದಿಗುಡ್ಡೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ನ ಸಹಯೋಗದೊಂದಿಗೆ ನೂತನ ಬಸದಿ ನಿರ್ಮಾಣದ ಪುಣ್ಯ ಕಾರ್ಯಗಳನ್ನು ಕೂಡ ಪ್ರಾರಂಭಿಸಿದ್ದರು. ಅವರ ನಿಧನಕ್ಕೆ
ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಸೇರಿದಂತೆ
ಹಲವು ಗಣ್ಯರು ಅಪಾರ ಸಂತಾಪ ವ್ಯಕ್ತಪಡಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading