
ಜ.1ರಂದು ದಿ. ಸಂತೋಷ್ ಮಡ್ತಿಲ ಅಭಿಮಾನಿ ಬಳಗದ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅವರ ಪ್ರಥಮ ವರ್ಷದ ಪುಣ್ಯತಿಥಿ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಜ.1 ರಂದು ನಡೆಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ, ವೈದ್ಯಾಧಿಕಾರಿ ಡಾ. ಕರುಣಾಕರ, ಡಾ. ಹಿಮಕರ, ದೊಡ್ಡಣ್ಣ ಬರೆಮೇಲು, ಶೈಲೇಶ್ ಅಂಬೆಕಲ್ಲು, ಹರೀಶ್ ಕಂಜಿಪಿಲಿ, ಹರೀಶ್ ಉಬರಡ್ಕ, ನವೀನ್ ರೈ ಮೇನಾಲ,ಮಹೇಶ್ ಮೇನಾಲ, ಸುನಿಲ್ ಕೇರ್ಪಳ, ಬಾಲರಾಜ್, ಬಾಲಕೃಷ್ಣ ನೆಡ್ಚಿಲು, ದಿ ಸಂತೋಷ್ ಮಡ್ತಿಲ ಪುತ್ರ ಯೋಹನ್ ಮಡ್ತಿಲ ಮೊದಲಾದವರು ಉಪಸ್ಥಿತರಿದ್ದರು.