ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ (ರಿ) ಸುಳ್ಯ ಇದರ ವಾರ್ಷಿಕ ಮಹಾ ಸಭೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಜರಗಿತು.
ಸಂಘದ ಮಹಾ ಸಭೆಯ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಗೋಪಾಲಕೃಷ್ಣ ಬೋರ್ಕರ್ , ಬಾಲಚಂದ್ರ ಅಡ್ಕಾರ್, ಶಂಕರ ಪಾಟಾಳಿ ಪರಿವಾರಕಾನ ಅವರು ಮುಖ್ಯ ಅತಿಥಿಗಳಾಗಿದ್ದರು ಹಾಗೂ ಗೋಪಾಲಕೃಷ್ಣ ಪಿ ಎಸ್ ಪಡ್ಡಂಬೈಲು ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವಾರ್ಷಿಕ ಲೆಕ್ಕ ಪತ್ರವನ್ನು ಸಂಘದ ಖಜಾಂಜಿ ಗೋಪಾಲಕೃಷ್ಣ ಮೊರಂಗಲ್ಲು ವಾಚಿಸಿದರು. ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಮಿಥುನ್ ಕರ್ಲಪ್ಪಾಡಿ ವಾಚಿಸಿದರು. ನಂತರ ಸಮಾಜದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪಿ ಯು ಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ವಿಧ್ಯಾನಿಧಿಯನ್ನು ನೀಡಿ ಗೌರವಿಸಲಾಯಿತು , ಅನಾರೋಗ್ಯಕ್ಕೆ ತುತ್ತಾದ ಸಮಾಜದ ಬಂಧುಗಳಿಗೆ ಆರೋಗ್ಯ ನಿಧಿಯಿಂದ ಮೊತ್ತವನ್ನು ನೀಡಿ ಆರೋಗ್ಯ ಸುಧಾರಿಸಲು ಹಾರೈಸಲಾಯಿತು ನಂತರ 2021/22ನೆ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು, ನೂತನ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಇರಂತಮಜಲು , ಕಾರ್ಯದರ್ಶಿಯಾಗಿ ಸುರೇಶ್ ಕರ್ಲಪ್ಪಾಡಿ , ಖಜಾಂಜಿಯಾಗಿ ಗೋಪಾಲಕೃಷ್ಣ ಮೊರಂಗಲ್ಲು , ಉಪಾಧ್ಯಕ್ಷರಾಗಿ ಅನುರಾಧ ಜಾಲ್ಸೂರು ,ಜೊತೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ಮೊರಂಗಲ್ಲು, ಸಂಘಟನಾ ಕಾರ್ಯದರ್ಶಿಯಾಗಿ ಸೀತಾರಾಮ ಕರ್ಲಪ್ಪಾಡಿ , ಸಮಿತಿ ಸಂಚಾಲಕರಾಗಿ ಚಂದ್ರಶೇಖರ ಉದ್ದಂತಡ್ಕ , ಆಂತರಿಕ ಲೆಕ್ಕ ಪರಿಶೋಧಕರಾಗಿ ಮಹಾಲಿಂಗ ಬಾಜಿರೊಟ್ಟಿ , ಕಾನೂನು ಸಲಹೆಗಾರರಾಗಿ ನಾರಾಯಣ ಪಾಟಾಳಿ ಕೆ. ಮತ್ತು ಸದಸ್ಯರುಗಳಾಗಿ ರಾಧಾಕೃಷ್ಣ ಬೇರ್ಪಡ್ಕ ,ಮಿಥುನ್ ಕರ್ಲಪ್ಪಾಡಿ, ಅಶ್ವಿತ್ ಅಡ್ಕಾರ್ ಬೈಲು , ನಾರಾಯಣ ಬಂಟ್ರಬೈಲು , ರವಿನ್ ರಾಜ್ ಅಡ್ಕಾರ್ , ಗೋಪಾಲಕೃಷ್ಣ ಕೊಲ್ಲಮೊಗ್ರ , ರವಿರಾಜ್ ಕರ್ಲಪ್ಪಾಡಿಯವರನ್ನು ಆಯ್ಕೆ ಮಾಡಲಾಯಿತು ನಂತರ ಶ್ರೀ ಸತ್ಯನಾರಾಯಣ ದೇವರ ಮಹಾ ಪೂಜೆ ನಡೆದು ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ನಂತರ ಸಮಾಜದ ಸದಸ್ಯರಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಜರಗಿತು. ಕಾರ್ಯದರ್ಶಿ ಮಿಥುನ್ ಕರ್ಲಪ್ಪಾಡಿ ಸ್ವಾಗತಿಸಿ, ನಿಯೋಜಿತ ಅಧ್ಯಕ್ಷ ರಮೇಶ್ ಇರಂತಮಜಲು ಧನ್ಯವಾದ ಸಮರ್ಪಿಸಿದರು. ಕೇಶವ ಮೊರಂಗಲ್ಲು ಕಾರ್ಯಕ್ರಮ ನಿರೂಪಿಸಿದರು.
- Saturday
- November 23rd, 2024