Ad Widget

ಐನೆಕಿದು ನಿಸರ್ಗ ಯುವಕ ಮಂಡಲ ಪದಗ್ರಹಣ – ಅಧ್ಯಕ್ಷ ಅಜಿತ್ ಕಲ್ಲೇರಿ, ಕಾರ್ಯದರ್ಶಿ ಭರತ್ ವಾಡ್ಯಪ್ಪನ ಮನೆ

ನಿಸರ್ಗ ಯುವಕ ಮಂಡಲ ಐನೆಕಿದು ಇದರ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಸಾಮಾನ್ಯ ಸಭೆಯು ಜ.02 ರಂದು ಐನೆಕಿದು ಶಾಲೆಯಲ್ಲಿ ನಡೆಯಿತು.
2022ನೇ ಸಾಲಿನ ನಿಸರ್ಗ ಯುವಕ ಮಂಡಲದ ಅಧ್ಯಕ್ಷರಾಗಿ ಅಜಿತ್ ಕಲ್ಲೇರಿ, ಉಪಾಧ್ಯಕ್ಷರಾಗಿ ಅಶೋಕ್ ಐಪಿನಡ್ಕ, ಕಾರ್ಯದರ್ಶಿಯಾಗಿ ಭರತ್ ವಾಡ್ಯಪ್ಪನ ಮನೆ, ಜೊತೆ ಕಾರ್ಯದರ್ಶಿಯಾಗಿ ಕುಶನ್ ನೆಕ್ರಾಜೆ, ಕೋಶಾಧಿಕಾರಿಯಾಗಿ ಸುಹಾಸ್ ಕೋಟೆಬೈಲು, ಕ್ರೀಡಾ ಕಾರ್ಯದರ್ಶಿಯಾಗಿ ಧನುಷ್ ಪೈಲಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೀಷ್ ಕುಜುಂಬಾರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯ ಕಿಶೋರ್ ಕುಮಾರ್ ಕೂಜುಗೋಡು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಆಚಾರ್ಯ ಪೈಲಾಜೆ, ಐನೆಕಿದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯರಾಮ್ ಕಟ್ರಮನೆ, ನಿಸರ್ಗ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮೀಶ ಇಜ್ಜಿನಡ್ಕ ಹಾಗೂ ನಿಯೋಜಿತ ಅದ್ಯಕ್ಷ ಅಜಿತ್ ಕಲ್ಲೇರಿ ಹಾಗೂ ಯುವಕ ಮಂಡಲದ ಸದಸ್ಯರುಗಳು ಉಪಸ್ಥಿತರಿದ್ದರು.

. . . . . . . . .

ವರದಿ :- ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading