Ad Widget

ಎನ್ನೆಂಸಿ: ಭಾಷಣ ಸ್ಪರ್ಧೆಯಲ್ಲಿ ದೀಪಾಲಿ ಸಿ ಕೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಅಂತಿಮ ಬಿ ಎಸ್ಸಿ ವಿದ್ಯಾರ್ಥಿನಿ ದೀಪಾಲಿ ಸಿ ಕೆ ಮಂಗಳೂರಿನ ನೆಹರೂ ಕೇಂದ್ರದವರು ನಡೆಸಿದ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರು ಕುರಿತ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರಿನ...

ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ

ಚಿಗುರು ಯುವಕ ಮಂಡಲ ಪೆರಾಜೆ ಮತ್ತು ಜ್ಯೋತಿ ಪ್ರೌಢಶಾಲೆ ಪೆರಾಜೆ ಕೊಡಗು ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ 'ಮಧುಮೇಹ ಮತ್ತು ರಕ್ತದೊತ್ತಡ ಬರದಂತೆ ತಡೆಯುವ ಮಾರ್ಗಗಳು' ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಡಿ.04ರಂದು ಜ್ಯೋತಿ ಪ್ರೌಢಶಾಲೆ ಪೆರಾಜೆ ಇಲ್ಲಿ ಜರುಗಿತು. ಕಾರ್ಯಕ್ರಮವನ್ನು ಎನ್.ಎ.ಜ್ಞಾನೇಶ್ ಅಧ್ಯಕ್ಷರು ಜ್ಯೋತಿ...
Ad Widget

ಸುಳ್ಯ ತಾಲೂಕು ಅಕ್ಷರದಾಸೋಹ ಪ್ರಭಾರ ಸಹಾಯಕ ನಿರ್ದೇಶಕರಾಗಿ ಶ್ರೀಮತಿ ವೀಣಾ.ಎಂ.ಟಿ

ಸುಳ್ಯ ತಾಲೂಕು ಅಕ್ಷರದಾಸೋಹ ಪ್ರಭಾರ ಸಹಾಯಕ ನಿರ್ದೇಶಕರಾಗಿ ಶ್ರೀಮತಿ ವೀಣಾ.ಎಂ.ಟಿ ನೇಮಕಗೊಂಡಿದ್ದಾರೆ. ಚಂದ್ರಶೇಖರ ಪೇರಾಲು ಇವರ ನಿವೃತ್ತಿಯಿಂದ ತೆರವಾಗಿರುವ ಈ ಸ್ಥಾನಕ್ಕೆ ಶ್ರೀಮತಿ ವೀಣಾ.ಎಂ.ಟಿ ನೇಮಕಗೊಂಡಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.ಇವರು ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಡೆಕೋಲು: ಮುತ್ತಪ್ಪ ಗೌಡ ನಾಪತ್ತೆ- ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲು

ಮಂಡೆಕೋಲು ಗ್ರಾಮದ ಕುತ್ತಿಮುಂಡ ಕುಟುಂಬದ ಶಿವಾಜಿನಗರ ನಿವಾಸಿ ಮುತ್ತಪ್ಪ ಗೌಡ ಅವರು ನ.30ರಂದು ಮನೆಯಿಂದ ಕೆಲಸಕ್ಕೆಂದು ಹೊರಟವರು ಕಾಣೆಯಾಗಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 48 ವರ್ಷ ಪ್ರಾಯದ ಇವರು ಮಂಡೆಕೋಲಿನಿಂದ ಸುಳ್ಯಕ್ಕೆ ಬಂದು ಅಲ್ಲಿಂದ ಪುತ್ತೂರಿಗೆ ಸರಕಾರಿ ಬಸ್ ಮೂಲಕ ಪ್ರಯಾಣಿಸಿರುವ ಮಾಹಿತಿ ಇದ್ದು ಯಾರಿಗಾದರೂ ಕಂಡುಬಂದಲ್ಲಿ ಸುಳ್ಯ ಠಾಣೆಯನ್ನು...

ಬಾಳಿಲ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಕುಕ್ಕೆಯಲ್ಲಿ ಕುಣಿತ ಭಜನಾ ಸೇವೆ

ಬಾಳಿಲ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಡಿ.03ರಂದು ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಕುಣಿತ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂದ್ರಪ್ಪಾಡಿ :- ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನರ ಪಾತ್ರ ಕಾರ್ಯಕ್ರಮದಲ್ಲಿ ಕೆ.ಎಸ್.ಎಸ್ ಕಾಲೇಜು ವಿದ್ಯಾರ್ಥಿಗಳು ಭಾಗಿ

ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ, ಐಕ್ಯೂಎಸಿ ಹಾಗೂ ಕಾಮರ್ಸ್ ಮತ್ತು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ನ.30 ರಂದು ಕಂದ್ರಪ್ಪಾಡಿಯ ಪ್ರೀತಮ್ ಮುಂಡೋಡಿ ಅವರ ಗದ್ದೆಯಲ್ಲಿ "ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನರ ಪಾತ್ರ" ಎಂಬ ಕಾರ್ಯಕ್ರಮ ನಡೆಯಿತು.ಈ ಭತ್ತ ನಾಟಿಯ ಕಾರ್ಯಕ್ರಮದಲ್ಲಿ ಕಾಲೇಜಿನ ಅಂತಿಮ ವಾಣಿಜ್ಯ ಎ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರೀತಮ್ ಮುಂಡೋಡಿ ಅವರ ಮನೆಯವರು ಈ ಕಾರ್ಯಕ್ರಮದಲ್ಲಿ...

ಸಂಪಾಜೆ : ಟೆಂಪೋ ಟ್ರಾವೆಲರ್ ಹಾಗೂ ಬೈಕ್ ನಡುವೆ ಅಪಘಾತ – ಬೈಕ್ ಸವಾರ ಕಂದಡ್ಕದ ಯುವಕ ಮೃತ್ಯು

ಟೆಂಪೋ ಟ್ರಾವೆಲರ್ ಹಾಗೂ ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್‌ ಸವಾರ ಸ್ಥಳದಲ್ಲೆ ಮೃತಪಟ್ಟ ಭೀಕರ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಗೂನಡ್ಕ ಎಂಬಲ್ಲಿ ಡಿ.3 ರ ಮಧ್ಯರಾತ್ರಿ ನಡೆದಿದೆ. ಸುಳ್ಯ ಕಸಬಾ ದುಗ್ಗಲಡ್ಕ ಕಂದಡ್ಕ ಕಾಲನಿ ನಿವಾಸಿ ಸೆಲ್ವ ಮೇಸ್ತ್ರಿ ಪುತ್ರ ವಿನೋದ್ ಕುಮಾರ್ (23) ಮೃತಪಟ್ಟ ಬೈಕ್‌ ಸವಾರ. ಸವಣೂರುನಿಂದ ವಿರಾಜಪೇಟೆ...

ಸುಬ್ರಹ್ಮಣ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆಸುಬ್ರಹ್ಮಣ್ಯದ ವತಿಯಿಂದ ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು. ಕಡಬ, ಇಚ್ಲಂಪಾಡಿ, ಗುಂಡ್ಯ, ಗುತ್ತಿಗಾರು ಮಾರ್ಗದಲ್ಲಿ ಬಸ್ಸಿನ ಸಮಸ್ಯೆ ಎದುರಾಗಿದ್ದು, ಈ ಭಾಗದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಈ ಮಾರ್ಗದಲ್ಲಿ ಬಸ್ ಒದಗಿಸುವಂತೆ ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು. ಪ್ರತಿಭಟನೆಯ...

ಸುಳ್ಯ :- ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರಗಳ ತೆರವು

ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಟೆಲು ಅಡಿಕೆಹಿತ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ಮರದ ದಿಮ್ಮಿಗಳಿಂದ ತುಂಬಿದ್ದು, ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ಇದನ್ನು ಮನಗಂಡ ದೊಡ್ಡತೋಟ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಡಿಸೆಂಬರ್ 02 ರಂದು ಈ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಸಮೀಪದ ಮನೆಯವರಾದ ಶಕುಂತಳಾ ಭಟ್ ಅಡಿಕೆಹಿತ್ಲು ಎಂಬುವವರು...

ಕಳಂಜ: ಬುಖಾರಿಯಾ ಜುಮಾ ಮಸ್ಜಿದ್ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

ಕಳಂಜದ ಬುಖಾರಿಯಾ ಜುಮಾ ಮಸ್ಜಿದ್ ನ ಆಡಳಿತ ಮಂಡಳಿಗೆನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಡಿ.01ರಂದು ನಡೆಯಿತು. ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್.ಕೆ.ಎಚ್, ಕೋಶಾಧಿಕಾರಿಯಾಗಿ ಮಹಮ್ಮದ್.ಕೆ.ಎಂ ಆಯ್ಕೆಯಾದರು.
Loading posts...

All posts loaded

No more posts

error: Content is protected !!