Ad Widget

ಕವನ : ಸಾವಿನ ಆಚೆಗೂ ಸಾವಿರ ನೋವಿದೆ…

ಸಾವಿನ ಆಚೆಗೂ ಸಾವಿರ ನೋವಿದೆ,ಬದುಕಲು ಇಲ್ಲಿ ಕಾರಣ ಏನಿದೆ…ಸಾಗುವ ದಾರಿಯಲ್ಲೂ ಸಾವಿರ ನೋವಿದೆ,ಸಾಧನೆಯ ಹಾದಿಯಲ್ಲೂ ಸಾವಿರ ನೋವಿದೆ…ಅನುಭವಿಸಿ ಅನುಭವಿಸಿ ಸಾಕಾಗಿ ಹೋಗಿದೆ… ಹತ್ತಾರು ವರ್ಷದ ಕನಸು ಮಣ್ಣಾಗಿ ಹೋಗಿದೆ,ಮುಂದಿನ ಬದುಕಿನ ಹಾದಿ ಕಾಣದಾಗಿದೆ,ಸುತ್ತ-ಮುತ್ತ ಎಲ್ಲವೂ ಕತ್ತಲಾಗಿ ಹೋಗಿದೆ…ಸಾಗುವ ದಾರಿಯ ತುಂಬಾ ನೋವುಗಳೇ ತುಂಬಿವೆ…ಕಷ್ಟಗಳು-ನಷ್ಟಗಳು ಸುತ್ತ, ಮುತ್ತ ಮುತ್ತಿವೆ…ಎತ್ತ ನೋಡಿದರತ್ತ ಅಂಧಕಾರವೇ ತುಂಬಿದೆ… ಸಾವಿನ ಆಚೆಗೂ ಸಾವಿರ...

ಮಡಪ್ಪಾಡಿ : ಅಣಬೆ ಬೇಸಾಯ ತರಬೇತಿ ಶಿಬಿರ

ಮಡಪ್ಪಾಡಿ ಗ್ರಾಮ ಪಂಚಾಯತ್ ನ ಅಕ್ಷಯ ಸಂಜೀವಿನಿ ಒಕ್ಕೂಟದ ವತಿಯಿಂದ ಡಿ.6 ರಂದು ಅಣಬೆ ಬೇಸಾಯ ತರಬೇತಿ ಶಿಬಿರ ನಡೆಯಿತು. ವೇದಿಕೆಯಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಹಾನ, ತೋಟಗಾರಿಕೆ ಸಹಾಯಕ ಅಧಿಕಾರಿ ಅರಬಣ್ಣ ಪೂಜಾರಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾ ವಿನೋದ್, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಕುಂತಳ ಕೇವಳ ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷರು...
Ad Widget

ಮಡಪ್ಪಾಡಿ : ಶೀರಡ್ಕ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನೆ

ಮಡಪ್ಪಾಡಿ ಗ್ರಾಮದ ಉಳ್ಳಾಕುಲು ಮತ್ತು ಮಲೆಭೂತಗಳ ದೈವಸ್ಥಾನ ಶೀರಡ್ಕದಲ್ಲಿ ಅವಶ್ಯಕ ಇರುವ ವಿಷಯಗಳ ಚಿಂತಿಸುವ ಸಲುವಾಗಿ ತಾಂಬೂಲ ಪ್ರಶ್ನೆ ಕಾರ್ಯಕ್ರಮವು ಡಿ.6 ರಂದು ಶೀರಡ್ಕ ಚಾವಡಿಯಲ್ಲಿ ಎ.ವಿ ತಂಬನ್ ಪೊದುವಾಳ್ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಶೀರಡ್ಕ ಬೈಲಿನವರು ಉಪಸ್ಥಿತರಿದ್ದರು.

ಡಿ.08 – ಡಿ.12: ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಬ್ರಹ್ಮಶ್ರೀ ಕೆ.ಯು ದಾಮೋದರ ತಂತ್ರಿಗಳವರ (ನೀಲೇಶ್ವರ) ನೇತೃತ್ವದಲ್ಲಿ ಡಿ.08 ಬುಧವಾರದಿಂದ ಷಷ್ಠಿ ಮಹೋತ್ಸವ ಆರಂಭಗೊಳ್ಳಲಿದ್ದು ಡಿ.12 ಆದಿತ್ಯವಾರದ ತನಕ ಜರುಗಲಿದೆ. ಡಿ.08 ಬುಧವಾರದಂದು ಪಂಚಮಿ ಪ್ರಯುಕ್ತ ಸಂಜೆ 06.30ರಿಂದ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ, ಆಸ್ತಿಕ ಬಂಧುಗಳು, ಸಂಘ ಸಂಸ್ಥೆಗಳು ಹಾಗೂ ಕಾಂಚೋಡು...

ಡಿ.14 ಹಾಗೂ ಡಿ.15: ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

ಕೇರ್ಪಡದ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವವು ಡಿ.14 ಹಾಗೂ ಡಿ.15ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಡಿ.14 ಮಂಗಳವಾರದಂದು ಬೆಳಿಗ್ಗೆ ಗಂಟೆ 7.30ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ| ಪುಣ್ಯಾಹವಾಚನ, ಮಹಾಗಣಪತಿ ಹೋಮ, ಚಂಡಿಕಾಯಾಗದ ಪ್ರಾರಂಭ, ಹಸಿರು ಹೊರೆಕಾಣಿಕೆ ಸಮರ್ಪಣೆ, ಬೆಳಿಗ್ಗೆ ಗಂಟೆ...

ಜೇಸಿಐ ವಲಯಾಧ್ಯಕ್ಷರಾಗಿ ಜೇಸೀಐ ಸುಳ್ಯ ಸಿಟಿಯ ರೋಯನ್ ಉದಯ್ ಕ್ರಾಸ್ತಾ ಆಯ್ಕೆ

ಜೇಸಿಐ ವಲಯಾಧ್ಯಕ್ಷರಾಗಿ ಜೇಸೀಐ ಸುಳ್ಯ ಸಿಟಿಯ ರೋಯನ್ ಉದಯ್ ಕ್ರಾಸ್ತಾ ಆಯ್ಕೆಯಾಗಿದ್ದಾರೆ. ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಅದ್ದೂರಿ ವಲಯ ಸಮ್ಮೇಳನದಲ್ಲಿ ಜೇಸಿಐ ಭಾರತ ವಲಯ ಹದಿನೈದರ ವಲಯಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೇಸಿಐ ಸುಳ್ಯ ಸಿಟಿಯ ನೋಮಿನಿ ಜೇಸೀ ರೋಯನ್ ಉದಯ್ ಕ್ರಾಸ್ತಾ ರವರು ಪ್ರತಿಸ್ಪರ್ಧಿ ಯವರಿಂದ ಸುಮಾರು 120 ಮತಗಳ ಅಂತರದಲ್ಲಿ ವಿಜಯಶಾಲಿಯಾದರು....

ಸುಳ್ಯ : ಶ್ರೀ ಚೆನ್ನಕೇಶವ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ – ಡಿಸೆಂಬರ್ 21ರಿಂದ 26ರ ವರೆಗೆ ಕಾರ್ಯಕ್ರಮ

ಶ್ರೀ ಚೆನ್ನಕೇಶವ ದೇವಸ್ಥಾನದ ನೂತನ ಗುಡಿಯಲ್ಲಿ ಶ್ರೀ ದುರ್ಗಾದೇವಿ ಪ್ರತಿಷ್ಠೆ ಮತ್ತು ಶ್ರೀ ಚೆನ್ನಕೇಶವ ದೇವರಿಗೆ ಬ್ರಹ್ಮಕಲಶಾಭಿಶೇಕದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಡಿ. 6 ರಂದು ದೇವಳದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಹಾಗೂ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ಅವರು ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ...

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವ- ಭಜನೆ ತರಬೇತಿ ಕಾರ್ಯಕ್ರಮ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ಇದರ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಡಿ.05(ಇಂದು)ರಂದು ಬೆಳಗ್ಗೆ 09.30ಕ್ಕೆ ಸರಿಯಾಗಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ನೆರವೇರಿತು. ಬಾಳಿಲ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರಾದ ಸೀತಾರಾಮ ಗೌಡ ಕಾಯರ ಇವರು ದೀಪ ಬೆಳಗಿಸಿ ಭಜನೆ ತರಬೇತಿಯನ್ನು ಉದ್ಘಾಟಿಸಿದರು. ಸಾರ್ವಜನಿಕ ದೇವತಾರಾಧನೆ ಸಮಿತಿ...

ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ನಾವೂರಿನಲ್ಲಿ ಕುಣಿತಭಜನೆ

ನಾವೂರು ಸುಬ್ರಮಣ್ಯ ದೇವಸ್ಥಾನದಲ್ಲಿ ಡಿ.04ರಂದು ನಡೆದ ಲಕ್ಷದೀಪೋತ್ಸವದಲ್ಲಿ ವಿದ್ಯಾಬೋಧೀನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ವಿದ್ಯಾರ್ಥಿಗಳು ಕುಣಿತ ಭಜನಾ ಸೇವೆ ನಡೆಸಿಕೊಟ್ಟರು. ಸಂಜೆ 8.00ರಿಂದ 10.00 ರವರೆಗೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ಭಜನಾ ತಂಡದ 25 ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಸುಬ್ಬಯ್ಯ ವೈ ಬಿ, ಎಸ್ಡಿಎಂಸಿ ಅಧ್ಯಕ್ಷ...

ಬೆಳ್ಳಾರೆ ಎಸ್ ಡಿಪಿಐ ವತಿಯಿಂದ ಶ್ರಮದಾನ

ಬೆಳ್ಳಾರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಬೆಳ್ಳಾರೆ 1ನೇ ವಾರ್ಡಿನ ಕೊಲಂಬಳ ಉಮಿಕ್ಕಳ ರಸ್ತೆಯ ಇಕ್ಕೆಲಗಳಲ್ಲಿ ತುಂಬಿಕೊಂಡಿದ್ದ ಪೊದೆಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಎಸ್.ಡಿ.ಪಿ.ಐ ಮುಖಂಡ ಇಕ್ಬಾಲ್ ಬೆಳ್ಳಾರೆ, ಸುಳ್ಯ ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿ ಹಾಜಿ.ಕೆ ಮಮ್ಮಾಲಿ, ಬೆಳ್ಳಾರೆ...
Loading posts...

All posts loaded

No more posts

error: Content is protected !!