- Wednesday
- April 2nd, 2025

ನಡುಗಲ್ಲು ಸಮೀಪದ ಅಂಜೇರಿಯ ಬಸ್ ತಂಗುದಾಣದ ಬಳಿ ಕಾಡಾನೆಯೊಂದು ಕಾಡಿನಿಂದ ರಸ್ತೆ ದಾಟಿದ ಘಟನೆ ಡಿ.10 ರ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.ಸುಬ್ರಹ್ಮಣ್ಯ ಗುತ್ತಿಗಾರು ಮುಖ್ಯ ರಸ್ತೆಯ ನಡುಗಲ್ಲು ಸಮೀಪದ ಅಂಜೇರಿ ಬಸ್ ತಂಗುದಾಣದ ಬಳಿ ಕಾಡಾನೆಯೊಂದು ಕಾಡಿನಿಂದ ಇಳಿದು ರಸ್ತೆ ದಾಟಿ ಕೆಳಭಾಗದ ತೋಟಕ್ಕೆ ತೆರಳಿದೆ.ಇದೇ ಸಂದರ್ಭದಲ್ಲಿ ವಾಹನಗಳು ರಸ್ತೆ ದಾಟುತ್ತಿದ್ದರೂ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.09 ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು. ಈ ಮೂಲಕ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನವಾಯಿತು. ಡಿ.08 ರಂದು ರಾತ್ರಿ ಪಂಚಮಿ ರಥೋತ್ಸವ ನೆರವೇರಿತು.ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆಯ ಪ್ರಯುಕ್ತ ಡಿ.8 ರಂದು ಪಂಚಮಿ ರಥೋತ್ಸವ ನೆರವೇರಿತು. ಶ್ರೀ ದೇಗುಲದ ಅರ್ಚಕ ವೇದಮೂರ್ತಿ ರಾಜೇಶ್ ನಡ್ಯಂತಿಲ್ಲಾಯ ವೈದಿಕ ವಿಧಿ-ವಿಧಾನಗಳನ್ನು...

ಇತ್ತೀಚೆಗೆ ನಿಧನರಾದ ಹಿಂದೂ ಜಾಗರಣ ವೇದಿಕೆ ತೊಡಿಕಾನ ಗ್ರಾಮದ ಗೌರವಾಧ್ಯಕ್ಷ ಕೃಷ್ಣಪ್ಪ ಅಡ್ಯಡ್ಕ ಅವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ರವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಸುಳ್ಯ ನಗರ ಪಂಚಾಯತ್ ನ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ 2.58 ಕೋಟಿ ರೂಪಾಯಿಗಳ ಜಾಕ್ ವೆಲ್ ನಿರ್ಮಾಣ ಕಾಮಗಾರಿಯು ಆರಂಭಗೊಂಡಿದೆ.ಕಳೆದ ಮಾರ್ಚ್ ನಲ್ಲಿ ಈ ಕಾಮಗಾರಿಯ ಟೆಂಡರ್ ಪೂರ್ಣಗೊಂಡಿದ್ದರೂ ಮಳೆಗಾಲವು ಬೇಗ ಆರಂಭದ ಕಾರಣ ಕಾಮಗಾರಿಯು ಆರಂಭವಾಗಿರಲಿಲ್ಲ. ಇದೀಗ ಕಾಮಗಾರಿಯ ಅರ್ಥ್ ವರ್ಕ್ ಆರಂಭಗೊಂಡಿದ್ದು ತಳಪಾಯದ ಬಂಡೆಯನ್ನು ಒಡೆದು ಹೊಳೆಯ ಮಟ್ಟದಿಂದ ಸುಮಾರು ಆರು...

ಗುತ್ತಿಗಾರು ಗ್ರಾಮಪಂಚಾಯತ್ ನಲ್ಲಿ ಡಿ.10 ರಂದು ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮಪಂಚಾಯತ್ ಅದ್ಯಕ್ಷರಾದ ರೇವತಿ ಆಚಳ್ಳಿ, ಉಪಾಧ್ಯಕ್ಷರಾದ ಪ್ರಮೀಳಾ ಎರ್ದಡ್ಕ ಹಾಗೂ ಗ್ರಾಮಪಂಚಾಯತ್ ಸದಸ್ಯರುಗಳಾದ ವೆಂಕಟ್ ವಳಲಂಬೆ, ವಿಜಯ ಕುಮಾರ್ ಚಾರ್ಮತ, ಹರೀಶ್ ಕೊಯಿಲ, ವಿನಯ್ ಸಾಲ್ತಾಡಿ, ಜಗದೀಶ್ ಬಾಕಿಲ, ಮಾಯಿಲಪ್ಪ ಕೊಂಬೆಟ್ಟು, ಅನಿತಾ ಮೆಟ್ಟಿನಡ್ಕ, ಭಾರತಿ ಸಾಲ್ತಾಡಿ, ಲೀಲಾವತಿ...

ವಿಧಾನ ಪರಿಷತ್ ಚುನಾವಣೆ ಇಂದು ನಡೆಯುತ್ತಿದ್ದು, ಕಳಂಜ ಗ್ರಾಮ ಪಂಚಾಯತಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮತದಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ರೈ ಕಳಂಜ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಸುಧಾ ವಾರಣಾಶಿ, ಕಮಲ ಮುಂಡುಗಾರು ಹಾಗೂ ಪ್ರೇಮಲತಾ ಮಣಿಮಜಲು ಉಪಸ್ಥಿತರಿದ್ದು ಮತದಾನಗೈದರು.

ಡಿ.15 ರಂದು ಅರೆಭಾಷೆ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಈ ವರ್ಷ ದಶ ವರ್ಷದ ಸಂಭ್ರಮದಲ್ಲಿ ಅರೆಭಾಷೆಯ ಅನೇಕ ಪುಸ್ತಕಗಳ ಬಿಡುಗಡೆ ಮಾಡಲಿದ್ದೇವೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಹೇಳಿದರುಅವರು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಡಿ.10ರಂದು ಮಾತನಾಡಿದರು. ಪ್ರಸ್ತುತ ಸಾಲಿನ ಅರೆಭಾಷೆ ದಿನಾಚರಣೆಯು ಕರ್ನಾಟಕ ರಾಜ್ಯದ ಹಲವು...

ಸುಬ್ರಹ್ಮಣ್ಯ ಗ್ರಾಮಪಂಚಾಯತ್ ನಲ್ಲಿ ಡಿ.10 ರಂದು ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಿತು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಲಲಿತಾ ಗುಂಡಡ್ಕ, ಉಪಾಧ್ಯಕ್ಷರಾದ ಸವಿತಾ ಭಟ್, ಸದಸ್ಯರುಗಳಾದ ಗಿರೀಶ್ ಆಚಾರ್ಯ ಪೈಲಾಜೆ, ಭಾರತಿ ಮೂಕಮಲೆ, ರಾಜೇಶ್ ಕುದುರೆಮಜಲು, ಮಲ್ಲಿಕಾ.ಕೆ, ಭರತ್ ಪರ್ವತಮುಖಿ, ವೆಂಕಟೇಶ್.ಎಚ್.ಎಲ್, ದಿನೇಶ್ ರಾವ್, ಜಯಂತಿ ಪರಮಲೆ, ಭವ್ಯ.ಬಿ, ಮೋಹನ್ ಕೋಟಿಗೌಡನ ಮನೆ, ಶಶಿಕಲಾ...

ಜಾಲ್ಸೂರು ಮಹಾಶಕ್ತಿ ಕೇಂದ್ರದ ಐವರ್ನಾಡು ಗ್ರಾಮ ಪಂಚಾಯತ್ ನ ಭಾರತೀಯ ಜನತಾ ಪಾರ್ಟಿ ಬೆಂವಲಿತ 12 ಸದಸ್ಯರುಗಳು ಎಸ್.ಎನ್ ಮನ್ಮಥರ ನೇತೃತ್ವದಲ್ಲಿ ಬಂದು ವಿಧಾನ ಪರಿಷತ್ ನ ಚುನಾವಣೆ ಗೆ ಮತ ಚಲಾವಣೆ ಮಾಡಿದರು.

ಕೊಲ್ಲಮೊಗ್ರು ಗ್ರಾಮಪಂಚಾಯತ್ ನಲ್ಲಿ ಡಿ.10 ರಂದು ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಿತು.ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮಪಂಚಾಯತ್ ಅದ್ಯಕ್ಷರಾದ ಉದಯ ಕೊಪ್ಪಡ್ಕ, ಉಪಾಧ್ಯಕ್ಷರಾದ ಜಯಶ್ರೀ ಚಾಂತಾಳ ಹಾಗೂ ಗ್ರಾಮಪಂಚಾಯತ್ ಸದಸ್ಯರುಗಳಾದ ಮಾಧವ ಚಾಂತಾಳ, ಅಶ್ವಥ್ ಯಾಲದಾಳು, ಪುಷ್ಪರಾಜ್ ಪಡ್ಪು, ಶಿವಮ್ಮ, ಮೋಹಿನಿ, ಶುಭಲತಾ ಇವರುಗಳು ಉಪಸ್ಥಿತರಿದ್ದು ಮತದಾನ ಮಾಡಿದರು. ವರದಿ :- ಉಲ್ಲಾಸ್ ಕಜ್ಜೋಡಿ

All posts loaded
No more posts