- Wednesday
- April 2nd, 2025

ಸುಳ್ಯ ತಾಲೂಕು ಅಕ್ಷರದಾಸೋಹ ಪ್ರಭಾರ ಸಹಾಯಕ ನಿರ್ದೇಶಕರಾಗಿ ಶ್ರೀಮತಿ ವೀಣಾ.ಎಂ.ಟಿ ನೇಮಕಗೊಂಡಿದ್ದಾರೆ. ಚಂದ್ರಶೇಖರ ಪೇರಾಲು ಇವರ ನಿವೃತ್ತಿಯಿಂದ ತೆರವಾಗಿರುವ ಈ ಸ್ಥಾನಕ್ಕೆ ಶ್ರೀಮತಿ ವೀಣಾ.ಎಂ.ಟಿ ನೇಮಕಗೊಂಡಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.ಇವರು ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಡೆಕೋಲು ಗ್ರಾಮದ ಕುತ್ತಿಮುಂಡ ಕುಟುಂಬದ ಶಿವಾಜಿನಗರ ನಿವಾಸಿ ಮುತ್ತಪ್ಪ ಗೌಡ ಅವರು ನ.30ರಂದು ಮನೆಯಿಂದ ಕೆಲಸಕ್ಕೆಂದು ಹೊರಟವರು ಕಾಣೆಯಾಗಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 48 ವರ್ಷ ಪ್ರಾಯದ ಇವರು ಮಂಡೆಕೋಲಿನಿಂದ ಸುಳ್ಯಕ್ಕೆ ಬಂದು ಅಲ್ಲಿಂದ ಪುತ್ತೂರಿಗೆ ಸರಕಾರಿ ಬಸ್ ಮೂಲಕ ಪ್ರಯಾಣಿಸಿರುವ ಮಾಹಿತಿ ಇದ್ದು ಯಾರಿಗಾದರೂ ಕಂಡುಬಂದಲ್ಲಿ ಸುಳ್ಯ ಠಾಣೆಯನ್ನು...

ಬಾಳಿಲ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಡಿ.03ರಂದು ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಕುಣಿತ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ, ಐಕ್ಯೂಎಸಿ ಹಾಗೂ ಕಾಮರ್ಸ್ ಮತ್ತು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ನ.30 ರಂದು ಕಂದ್ರಪ್ಪಾಡಿಯ ಪ್ರೀತಮ್ ಮುಂಡೋಡಿ ಅವರ ಗದ್ದೆಯಲ್ಲಿ "ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನರ ಪಾತ್ರ" ಎಂಬ ಕಾರ್ಯಕ್ರಮ ನಡೆಯಿತು.ಈ ಭತ್ತ ನಾಟಿಯ ಕಾರ್ಯಕ್ರಮದಲ್ಲಿ ಕಾಲೇಜಿನ ಅಂತಿಮ ವಾಣಿಜ್ಯ ಎ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರೀತಮ್ ಮುಂಡೋಡಿ ಅವರ ಮನೆಯವರು ಈ ಕಾರ್ಯಕ್ರಮದಲ್ಲಿ...