Ad Widget

ನಾಲ್ಕೂರು: ನೂತನ ‘ಹೊಂಬೆಳಕು’ ಸೇವಾ ತಂಡ ಅಸ್ತಿತ್ವಕ್ಕೆ, ಬಸ್ ತಂಗುದಾಣ ಸ್ವಚ್ಚತೆ

ಗುತ್ತಿಗಾರು: ಇಲ್ಲಿನ ನಾಲ್ಕೂರು ಗ್ರಾಮದ ಸಮಾನ ಮನಸ್ಕರ ಯುವಕರ ತಂಡ ‘ಹೊಂಬೆಳಕು’ ನ.14ರಂದು ಅಸ್ವಿತ್ವಕ್ಕೆ ಬಂದಿತು. ‘ನಮ್ಮ ನಡಿಗೆ ಸ್ವಚ್ಛತೆಯ ಕಡೆಗೆ’ ಎಂಬ ಧ್ಯೇಯೋದ್ಧೇಶದೊಂದಿಗೆ ಪ್ರಾರಂಭವಾದ ತಂಡವನ್ನು ಕೃಷಿಕರಾದ ಎಂ.ಕೆ.ಮೋಹನ್ ಕುಮಾರ್‌ರವರು ತಂಡದ ಸದಸ್ಯರಿಗೆ ಸಮವಸ್ತ್ರ ನೀಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ತಂಡವು ಗ್ರಾಮದ ಬಸ್ಸು ತಂಗುದಾಣ, ಶಾಲೆ ಹಾಗೂ ಇನ್ನಿತರ ಸರ್ಕಾರಿ ಸ್ವಾಮ್ಯದ...

ಬಾಳಿಲ: ಸುವಿಚಾರ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ ಇದರ ಸುವಿಚಾರ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆಯನ್ನು ಸಾಹಿತ್ಯ ಸಂವಾದವನ್ನು ನಡೆಸುವುದರ ಮೂಲಕ ನೀಡಲಾಯಿತು. ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇದರ ಪ್ರೌಢಶಾಲಾ ವಿಭಾಗದ ಆಂಗ್ಲಭಾಷಾ ಶಿಕ್ಷಕಿ ಶ್ರೀಮತಿ ಪ್ರೇಮಾ ಉದಯಕುಮಾರ್ ಇವರು ವಿದ್ಯಾರ್ಥಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ ಮೊದಲು ಉತ್ತಮ ಸಾಹಿತ್ಯಗಳನ್ನು ಆಲಿಸುವ, ವಿಚಾರಗಳ ಬಗ್ಗೆ ಮಾತನಾಡುವ,...
Ad Widget

ಶ್ರೀಮತಿ ಸೀತಮ್ಮ ಕಳಂಜ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ಕಳಂಜ ಗ್ರಾಮದ ಸೀತಮ್ಮ ಕಳಂಜ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನ.14ರಂದುಸ್ವಗೃಹದಲ್ಲಿ ನಡೆಯಿತು. ಮೃತರ ಗೌರವಾರ್ಥ ಮೃತರ ಸಂಬಂಧಿ ರಾಮಣ್ಣ ಗೌಡ ಕಾಣಿಯೂರು ನುಡಿನಮನಗೈದರು. ಈ ಸಂದರ್ಭದಲ್ಲಿ ಶ್ರೀಮತಿ ಸೀತಮ್ಮರವರ ಪತಿ ಸುಬ್ರಾಯ ಗೌಡ, ಸಹೋದರಿ ಹೊನ್ನಮ್ಮ, ಪುತ್ರ ಪುರಂದರ ಗೌಡ, ಸೊಸೆ ಶ್ರೀಮತಿ ರಮ್ಯ, ಮೊಮ್ಮಗಳು ಬೇಬಿ ಜನನಿ, ಪುತ್ರಿಯರಾದ ಶ್ರೀಮತಿ ಮೀನಾಕ್ಷಿ,...

ದರ್ಖಾಸ್ತು: ಮಕ್ಕಳ ದಿನಾಚರಣೆಗೆ ಶಾಲಾ ಮಕ್ಕಳಿಗೆ ಕೊಡುಗೆ

ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಇಲ್ಲಿ ಮಕ್ಕಳ ದಿನಾಚರಣೆಯನ್ನು ನ.14ರಂದು ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಸುಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಯಾದ ಹರಿಪ್ರಸಾದ್ ಆಳ್ವರವರು ಮಕ್ಕಳಿಗೆ ಪ್ರೀತಿಯ ಕೊಡುಗೆಯಾಗಿ ಸುಮಾರು ರೂ. 45,000 ಮೌಲ್ಯದ ಬೆಂಚು, ಡೆಸ್ಕುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಹರಿಪ್ರಸಾದ್ ಆಳ್ವರವರ ತಾಯಿ ಶ್ರೀಮತಿ ವಾರಿಜ, ಸಹೋದರಿ ಶ್ರೀಮತಿ ಸುಪ್ರಿಯಾ ಆಳ್ವ, ಸುಳ್ಯ ತಾಲೂಕು ಮಹಿಳಾ ವಿವಿದ್ಧೋದೇಶ...

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಲಕ್ಷದೀಪೋತ್ಸವದ ಅಂಗವಾಗಿ ಸಂತವಾಣಿ ಕಾರ್ಯಕ್ರಮ

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ.14 ಆದಿತ್ಯವಾರದಂದು ಆರಂಭಗೊಂಡಿದ್ದು, ಬೆಳಗ್ಗೆ ಶ್ರೀ ದೇವರಿಗೆ ಪ್ರಾರ್ಥನೆ, ಬಳಿಕ ಪಂಡಿತ್ ದೇವರಾಯ ಕಿಣಿ ಮತ್ತು ಬಳಗದವರಿಂದ ಸಂತವಾಣಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಮೊಕ್ತೇಸರರಾದ ಯಂ. ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬಿ....

ರೈತರ ಸಂಕಷ್ಟ ಆಲಿಸಲು ರೈತ ಮೋರ್ಚಾ ಪದಾಧಿಕಾರಿಗಳ ಸಭೆ- ರಾಧಾಕೃಷ್ಣ ಬೊಳ್ಳೂರು

ಕೊಡಗು, ದ.ಕ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳ ಸಭೆ ನ.18 ರಂದು ಸುಳ್ಯ ವೆಂಕಟ್ರಮಣ ದೇವಸ್ಥಾನದಲ್ಲಿ ಬೆ.11 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರು ತಿಳಿಸಿದ್ದಾರೆ. ನ.೧೩ ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಸಭೆಯಲ್ಲಿ ರಾಜ್ಯ ರೈತ ಮೋರ್ಚಾದ ಪ್ರಮುಖರು, ಜಿಲ್ಲಾ ಹಾಗೂ ತಾಲೂಕು ಮಟ್ಟದ...

ವೆಂಕಟರಮಣ ಸೊಸೈಟಿ 453 ಕೋ.ರೂ ವ್ಯವಹಾರ: 1.09 ಕೋಟಿ ಲಾಭ – ಸದಸ್ಯರಿಗೆ 15 % ಡಿವಿಡೆಂಟ್- ಪಿಸಿ ಜಯರಾಮ ಘೋಷಣೆ

ಸುಳ್ಯ: ಈ ಪ್ರಸಕ್ತ ಸಾಲಿನ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವಾರ್ಷಿಕ 453 ಕೋಟಿ ವ್ಯವಹಾರ ನಡೆಸಿ 1.09 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 15 ಡಿವಿಡೆಂಡ್ ನೀಡಲಾಗುವುದು. ಶೀಘ್ರದಲ್ಲೇ ಸುಬ್ರಹ್ಮಣ್ಯ ಮತ್ತು ಮಡಂತ್ಯಾರುನಲ್ಲಿ ಶಾಖೆ ಆರಂಭಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಹೇಳಿದರು.ಅವರು ಗೌಡ ಸಮುದಾಯ ಭವನದಲ್ಲಿ ವಾರ್ಷಿಕ...

ಸುಳ್ಯ: ಶ್ರೀ ಶಾರದಾ ಮಹಿಳಾ ಪದವಿ ಕಾಲೇಜಿನಲ್ಲಿ “ಮೂಲ-ಸಂಪನ್ಮೂಲ” ವಿಷಯದ ಕುರಿತು ಸಂವಾದ ಕಾರ್ಯಕ್ರಮ

ಶ್ರೀ ಶಾರದಾ ಮಹಿಳಾ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಕಾರ್ಯ ಸಾಧನೆಗೆ "ಮೂಲ-ಸಂಪನ್ಮೂಲ " ವಿಷಯದ ಕುರಿತು ಉಪನ್ಯಾಸಕರೊಂದಿಗೆ ನೇರ ಸಂವಾದ ಕಾರ್ಯಕ್ರಮ ನ.13ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಉಜಿರೆ ಎಸ್.ಡಿ.ಎಂ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ಪುಂಡರೀಕ ಎ.ಕೆ ಇವರು ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ದ.ಕ.ಗೌಡ ವಿದ್ಯಾಸಂಘ(ರಿ.)ಸುಳ್ಯ ಇದರ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ, ಪ್ರಧಾನ...

ನ.14 ರಂದು ಕಲ್ಲುಗುಂಡಿ ಸರಕಾರಿ ಶಾಲೆಗೆ ಹಿರಿಯ ವಿದ್ಯಾರ್ಥಿಗಳಿಂದ ಕೊಡುಗೆ ಹಸ್ತಾಂತರ

ಹಳೆ ವಿದ್ಯಾರ್ಥಿಗಳ ಸಹಕಾರ ದಿಂದ ಸಂಗ್ರಹಿಸಿದ ಕೊಡುಗೆಗಳನ್ನು ನ.14 ರಂದು ಕಲ್ಲುಗುಂಡಿ ಸರಕಾರಿ ಶಾಲೆಗೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಪತ್ರಕರ್ತ ಹೇಮಂತ್ ಸಂಪಾಜೆ ಅವರು ಹೇಳಿದರು. ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಲೀನವಾಗುವ ಹಂತಕ್ಕೆ ಬಂದಿದೆ. ಕಲ್ಲುಗುಂಡಿಯ ಸರಕಾರಿ ಕನ್ನಡ ಶಾಲೆಗೆ ಮೂಲಭೂತ...

ಆಲೆಟ್ಟಿ : ಗ್ರಾಮ ಕರಣಿಕರ ಕಚೇರಿಗೆ ಪ್ರಿಂಟರ್ ಕೊಡುಗೆ

ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಗ್ರಾಮಕರಣಿಕರ ಕಚೇರಿಗೆ ಉದ್ಯಮಿ ಅಶೋಕ ಪ್ರಭು ಇವರು ಪ್ರಿಂಟರ್ ಕೊಡುಗೆ ನೀಡಿರುತ್ತಾರೆ.
Loading posts...

All posts loaded

No more posts

error: Content is protected !!