Ad Widget

ನಿಂತಿಕಲ್ಲು : ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯ ಪ್ರಥಮ ಲಕ್ಕೀ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

ನಿಂತಿಕಲ್ಲು ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು 3ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು ಈ ಹಿನ್ನೆಲೆಯಲ್ಲಿ 'ಲಕ್ಕೀ ಡ್ರಾ' ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯ ಪ್ರಥಮ ಲಕ್ಕೀ ಡ್ರಾ ನ.13ರಂದು ನಡೆದಿದ್ದು, ವಿಜೇತರಾದ ರೋನವ್ ಪ್ರಸಾದ್ ಹಾಲೆಮಜಲು ಇವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನವನ್ನು ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು ಹಾಗೂ...

ಕೇನ್ಯ:ಹಿಂದು ಜಾಗರಣ ವೇದಿಕೆ ಮಹಾವಿಷ್ಣು ಘಟಕ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಹಿಂದೂ ಜಾಗರಣ ವೇದಿಕೆ ಮಹಾವಿಷ್ಟು ಘಟಕ ಕಣ್ಕಲ್ ಕೇನ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸುಬ್ರಹ್ಮಣ್ಯ ಗೌಡ ಕಣ್ಕಲ್ ರವರ ಮನೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪದ್ಮನಾಭ ಕೆರೆಕೋಡಿ, ಉಪಾಧ್ಯಕ್ಷರಾಗಿ ಮಾಧವ ಕೆ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಐನಡ್ಕ, ಕಾರ್ಯದರ್ಶಿಯಾಗಿ ಸದಾನಂದ ಕೆರೆಕೋಡಿ, ಪ್ರಚಾರ ಪ್ರಮುಖ್ ಆಗಿ ಲೋಕೇಶ್ ಕೆರೆಕೋಡಿ, ಸಂಪರ್ಕ ಪ್ರಮುಖ್...
Ad Widget

ಶುಭವಿವಾಹ: ರಮಾನಂದ-ಭವ್ಯ

ಸುಳ್ಯ ತಾಲ್ಲೂಕು ಉಬರಡ್ಕ ಮಿತ್ತೂರು ಗ್ರಾಮದ ಕಾಡುತೋಟ ಮನೆ (ಕೊರಂಬಡ್ಕ)ದೇರಣ್ಣ ಗೌಡರ ಪುತ್ರ ಚಿ. ರಾ.ರಮಾನಂದ ರ ವಿವಾಹವು ಕಡಬ ತಾಲ್ಲೂಕು ದೋಳ್ಪಾಡಿ ಗ್ರಾಮದ ಕೆಳಗಿನ ಮನೆ ತಿಮ್ಮಪ್ಪ ಗೌಡರ ಪುತ್ರಿ ಚಿ. ಸೌ.ಭವ್ಯ ರೊಂದಿಗೆ ನ.10 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ರೆಂಜಿಲಾಡಿ : ಗೋಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ; ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಗೆ ಕಡಿವಾಣ ಬೀಳಬೇಕಿದೆ – ಶ್ರೀನಿವಾಸ್ ಉಬರಡ್ಕ

ಕಡಬ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ರೆಂಜಿಲಾಡಿ ಘಟಕದ ವತಿಯಿಂದ ಎಳುವಾಳೆಯಲ್ಲಿ ನ.14ರ ಆದಿತ್ಯವಾರದಂದು ಗೋ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು.ಆರಂಭದಲ್ಲಿ ಗೋ ಪೂಜೆ ಕಾರ್ಯಕ್ರಮ ನಡೆಯಿತು. ಗೋವುಗಳಿಗೆ ಪೂಜೆ ನೆರವೇರಿಸಿ ಪ್ರಸಾದ ನೀಡಲಾಯಿತು. ಅರ್ಚಕ ಕೃಷ್ಣ ಹೆಬ್ಬಾರ್ ವೈಧಿಕ ವಿಧಿ ವಿಧಾನ ನೆರವೇರಿಸಿದರು.ಪ್ರಮುಖ ಭಾಷಣ ನೆರವೇರಿಸಿದ ರಾಷ್ಟ್ರೀಯ ಸ್ವಯಂ ಸೇವಕ...

ವಿವಾಹ ನಿಶ್ಚಿತಾರ್ಥ: ಜಯಶ್ರೀ-ದಯಾನಂದ

ಕಳಂಜ ಗ್ರಾಮದ ಪಾಂಡಿಪಾಲು ದುಗ್ಗಪ್ಪ ಗೌಡರ ಪುತ್ರಿ ಜಯಶ್ರೀ ಯವರ ವಿವಾಹ ನಿಶ್ಚಿತಾರ್ಥವು ಕಡಬ ತಾಲೂಕು ಸವಣೂರು ಗ್ರಾಮದ ಮಾಲೆತ್ತಾರು ದಿ|ಚೆನ್ನಪ್ಪ ಗೌಡರ ಪುತ್ರ ದಯಾನಂದ ರೊಂದಿಗೆ ನ.14ರಂದು ಅಯ್ಯನಕಟ್ಟೆಯ ಪಂಡಿತ್ ದೀನ್ ದಯಾಳ್ ಸಮುದಾಯ ಭವನದಲ್ಲಿ ನಡೆಯಿತು.

ಶೇಣಿ: ಕಲ್ಲುಮಲೆ ನಿವಾಸಿಗಳ ಮನೆಯ ರಸ್ತೆ ನಿರ್ಮಾಣ ಕಾರ್ಯ ಆರಂಭ

ಅಮರಪಡ್ನೂರು ಗ್ರಾಮದ ಕಲ್ಲುಮಲೆ ಪರಿಶಿಷ್ಟ ಜಾತಿ ಮನೆಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕೆಂಬ ಮನವಿಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು ಮತ್ತು ದಲಿತ ಮುಖಂಡೆ ಸರಸ್ವತಿ ಬೊಳಿಯಮಜಲು ರವರ ನೇತೃತ್ವದಲ್ಲಿ ಅಕ್ಟೋಬರ್ 16ರಂದು ಜಿಲ್ಲಾಧಿಕಾರಿಗಳ ಅಮರಮೂಡ್ನೂರು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಫಲಾನುಭವಿಗಳು ಮನವಿ ಸಲ್ಲಿಸಿದ್ದರು. ಸದರಿ ರಸ್ತೆಯು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ...

ಮುರಳಿಕೃಷ್ಣ-ಸತ್ಯವತಿ(ಸರಿತಾ) ವಿವಾಹ ನಿಶ್ಚಿತಾರ್ಥ

ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀಮತಿ ಸಾವಿತ್ರಿ ಮತ್ತು ಮೋಹನಕುಮಾರ ಗೌಡರ ಸುಪುತ್ರ ಮುರಳಿಕೃಷ್ಣ ಅವರ ವಿವಾಹ ನಿಶ್ಚಿತಾರ್ಥವು ಕಡಬ ತಾಲೂಕು ಎಡಮಂಗಲ ಗ್ರಾಮದ ನಾಗನಕಜೆ ಶ್ರೀಮತಿ ಉಮಾವತಿ ಮತ್ತು ನಾರ್ಣಪ್ಪ ಗೌಡರ ಪುತ್ರಿ ಸತ್ಯವತಿ(ಸರಿತಾ) ರೊಂದಿಗೆ ನ.14 ರಂದು ವಧುವಿನ ಮನೆಯಲ್ಲಿ ನಡೆಯಿತು.

ಡಾ.ಮುರಲೀ ಮೋಹನ ಚೂಂತಾರು ಫೆಲೋಶಿಪ್ ಗೆ ಆಯ್ಕೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದಂತ ವೈದ್ಯ ಡಾ.ಮುರಲೀ ಮೋಹನ ಚೂಂತಾರು ಅವರನ್ನು ಫೆಲೋಶಿಪ್ ಗೆ ಆಯ್ಕೆ ಮಾಡಿದೆ.ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನದ ಜತೆಗೆ, ವಿಜ್ಞಾನಿಗಳು, ತಂತ್ರಜ್ಞರು ಮತ್ತು ವಿಜ್ಞಾನ ಸಂವಹನಕಾರರನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ.ವಿಜ್ಞಾನ,ತಂತ್ರಜ್ಞಾನ, ಕೃಷಿ,ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅ.29ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಫೆಲೋಶಿಪ್...

ಮಕ್ಕಳ ದಿನವೆಂದರೇ ಅಂದು ಹಬ್ಬದ ದಿನ

ಬಾಲ್ಯದಲ್ಲಿ ಮಕ್ಕಳ ದಿನವೆಂದರೆ ಹಬ್ಬದ ದಿನವಾಗಿರುವುದು ಅಕ್ಷರಶಃ ಸತ್ಯ .ಬೆನ್ನಿಗೆ ಹತ್ತು ಕೆಜಿಗೆ ಸಮಾನವಾದ ಬ್ಯಾಗ್ ಹಾಕಿ ಶಾಲೆಗೆ ನಡೆದಾಗ ಒಂದೊಮ್ಮೆ ರಜೆ ಸಿಗಲಿ ಎನ್ನುತ್ತಿದ್ದೆವು. ಮಕ್ಕಳಿಗಿಂತ ಬ್ಯಾಗ್ ಗಳ ತೂಕವೇ ಅಧಿಕವಾದರೆ ಅಂತಹ ಬ್ಯಾಗ್ ಇಲ್ಲದೆ ಶಾಲೆಗೆ ತೆರಳುವ ದಿನಗಳಲ್ಲಿ ಮಕ್ಕಳ ದಿನಾಚರಣೆಯು ಒಂದಾಗಿತ್ತು. ಸಮವಸ್ತ್ರ ಧರಿಸಿ ಕೈ ಬೀಸಿ ಬರುವಾಗ ಯಾರಾದರೂ ಬ್ಯಾಗ್...

ಐನೆಕಿದು : ಸುಬ್ರಹ್ಮಣ್ಯ ಗ್ರಾ.ಪಂ. ವತಿಯಿಂದ ಶಾಲೆಗೆ ಕ್ರೀಡಾ ಸಾಮಾಗ್ರಿ ವಿತರಣೆ

ಐನೆಕಿದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನ.10 ರಂದು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ವತಿಯಿಂದ ಕ್ರೀಡಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸರಿತಾ, ಸಹ ಶಿಕ್ಷಕಿ ಕುಮಾರಿ, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಲಲಿತಾ ಗುಂಡಡ್ಕ ಹಾಗೂ ಗ್ರಾಮಪಂಚಾಯತ್ ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ಶ್ರೀಮತಿ ಭಾರತಿ ಮೂಕಮಲೆ ಹಾಗೂ ಎಸ್.ಡಿ.ಎಂ.ಸಿ...
Loading posts...

All posts loaded

No more posts

error: Content is protected !!