ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ವತಿಯಿಂದ 2021 ಜುಲೈ 29 ರಂದು ವನಮಹೋತ್ಸವ ದಿನಾಚರಣೆಯ ಅಂಗವಾಗಿ “ಹಸಿರು ಬೆಳೆಸಿ, ಉಸಿರು ಉಳಿಸಿ” ಕಾರ್ಯಕ್ರಮದಲ್ಲಿ ಕಲ್ಮಕಾರು ಭಜನಾ ಮಂದಿರ, ಗಡಿಕಲ್ಲು ರುದ್ರ ಭೂಮಿಯ ಸುತ್ತ, ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಪ್ರಾಥಮಿಕ ಶಾಲಾ ವಠಾರ, ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರ, ಅರಣ್ಯ ವಿಶ್ರಾಂತಿಧಾಮ ಬಂಗ್ಲೆಗುಡ್ಡೆ, ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೊಲ್ಲಮೊಗ್ರು ದೊಡ್ಡಣ್ಣ ಶೆಟ್ಟಿ ಕೆರೆಯ ದಂಡೆಯ ಮೇಲೆ ಹಾಗೂ ಬೆಂಡೋಡಿ ರುದ್ರ ಭೂಮಿಯ ಸುತ್ತ ನಾಟಿ ಮಾಡಿದ ಹಸಿರು ಗಿಡಗಳ ಆರೈಕೆ ಹಾಗೂ ಗಿಡಗಳ ಸುತ್ತ-ಮುತ್ತಲೂ ಹಬ್ಬಿಕೊಂಡಿದ್ದ ಬಳ್ಳಿಗಳನ್ನು ಬಿಡಿಸಿ, ಗಿಡದ ಬುಡಕ್ಕೆ ಮಣ್ಣು ಹಾಕಿ ಸಾವಕಾಶವಾಗಿ ಗಿಡಗಳು ಬೆಳೆಯುವಂತೆ ಗಿಡಗಳ ಬುಡದ ನೆಲವನ್ನು ಹಸನುಗೊಳಿಸುವ ಕಾರ್ಯ ನ.24 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್, ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್ ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಭಾಗಿಯಾಗಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ