Ad Widget

ಕಡಬ : ಬಿಸಿ ಸಾಂಬಾರು ಬಿದ್ದು ಗಾಯಗೊಂಡ ಮಗುವಿನ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ಬಿಸಿ ಸಾಂಬಾರು ಬಿದ್ದು ಗಾಯಗೊಂಡ ಬೇಬಿ ಹೃತಿಕಾ ಳ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ. ಸಹೃದಯಿಗಳು ಈ ಕೆಳಗೆ ಕಾಣಿಸಿದ ಖಾತೆಗೆ ಧನಸಹಾಯ ಮಾಡಿ ನೆರವಾಗಬಹುದು.

ಡಿ.1 ರಿಂದ 15 ರವರೆಗೆ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ – ಡಿ.9 ರಂದು ಬ್ರಹ್ಮರಥೋತ್ಸವ

ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವಕ್ಕೆ ದಿನಗಣನೆ ಆರಂಭವಾಗಿದೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ ಆರಂಭವಾದರೆ, ಡಿ.15 ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರಾ ಉತ್ಸವ ಸಮಾಪನಗೊಳ್ಳಲಿದೆ.ಡಿ.9ರಂದು ಚಂಪಾಷಷ್ಠಿಯ ವೈಭವದ ಬ್ರಹ್ಮ ರಥೋತ್ಸವ ಕ್ಷೇತ್ರದಲ್ಲಿ ಜರುಗಲಿದೆ. ಉದ್ಯಮಿ ದಿ.ಮುತ್ತಪ್ಪ ರೈ ಸೇವಾ ರೂಪದಲ್ಲಿ ನೀಡಿದ ಬ್ರಹ್ಮರಥದಲ್ಲಿ...
Ad Widget

ನ.24 : ರವಿ ಕಕ್ಕೆಪದವು ಅವರ ಬಗ್ಗೆ ಕೃತಿ ಬಿಡುಗಡೆ ಹಾಗೂ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ

ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಕಕ್ಕೆಪದವು ಅವರ ಕುರಿತ ಡಾ.ರಾಜೇಶ್ವರಿ ಗೌತಮ್ ಬರೆದ 'ಬೆಂಕಿಯಲ್ಲಿ ಅರಳಿದ ಹೂವು' ಎಂಬ ಕೃತಿ ಬಿಡುಗಡೆ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಅಭಿನಂದನಾ ಕಾರ್ಯಕ್ರಮ ನ.24 ರಂದು ಸುಬ್ರಹ್ಮಣ್ಯದಲ್ಲಿ ನಡೆಯಲಿದೆ. ಜೇಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀ ವತಿಯಿಂದ ವಲ್ಲೀಶ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರು...

ಗುತ್ತಿಗಾರು : ಚಿಣ್ಣರ ಮನೆ ಉದ್ಘಾಟನೆ

ಗುತ್ತಿಗಾರಿನ ಸ್ವಾತಿ ಸಂಕೀರ್ಣದಲ್ಲಿ ನ.22 ರಂದು ಚಿಕ್ಕ ಮಕ್ಕಳ ಆರೈಕೆ ಕೇಂದ್ರ "ಚಿಣ್ಣರ ಮನೆ" ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು.ಗಣಪತಿ ಹೋಮ ವನ್ನು ವೇದಮೂರ್ತಿ ಶಿವಸುಬ್ರಹ್ಮಣ್ಯ ಜೋಯಿಸ ನೆರವೇರಿಸಿದರು.ಸ್ವಾತಿ ಕೃಷಿ ಲಿಂಕ್ಸ್ ನ ಎಂ ಸುಬ್ರಹ್ಮಣ್ಯ ಭಟ್ ಮತ್ತು ಬಾಲಸುಬ್ರಹ್ಮಣ್ಯ ಭಟ್, ಸಂಜೀವಿನಿ ಸಂಘದ ಗುತ್ತಿಗಾರು ಪ್ರೇರಖಿ ಮಿತ್ರಕುಮಾರಿ ಚಿಕ್ಮುಳಿ, ದಿವ್ಯ ಚತ್ರಪ್ಪಾಡಿ, ತಿರುಮಲೇಶ್ವರ ಭಟ್,ಮಿಥುನ್ ತುಪ್ಪದಮನೆ,...

ಕಾಂಗ್ರೆಸ್ ಮುಖಂಡರಿಂದ ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಭೇಟಿ

ವಿಧಾನಪರಿಷತ್ ಚುನಾವಣೆಗೆ ದ.ಕ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಮಂಜುನಾಥ ಭಂಡಾರಿ ಅವರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ನೇತೃತ್ವದಲ್ಲಿ ನ.23 ರಂದು ಭೇಟಿ ಮಾಡಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್...

ಗಟ್ಟಿಗಾರು : ಶಾಲಾ ಬಳಿಯ ರಸ್ತೆ ದುರಸ್ತಿ ಪಡಿಸಲು ಗ್ರಾಮಸ್ಥರ ಒತ್ತಾಯ

ಜೀರ್ಮುಕ್ಕಿ ಬೊಮ್ಮಾರು ರಸ್ತೆಯಲ್ಲಿ ಗಟ್ಟಿಗಾರು ಶಾಲೆಯ ಹತ್ತಿರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. 20 ಮೀಟರ್ ನಷ್ಟು ರಸ್ತೆ ಕೆಸರುಮಯವಾಗಿದೆ. ಶಾಲಾ ಮಕ್ಕಳಿಗೆ ನಡೆದಾಡಲು ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರಂತು ಹರಸಾಹಸಪಡುವಂತಾಗಿದೆ. ಈ ಬಗ್ಗೆ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಕೂಡಲೇ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನ.26-27 : ಎಲಿಮಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ ಹಾಗೂ ಅಂತರ ರಾಜ್ಯ ಸಾಂಸ್ಕ್ರತಿಕ ವಿನಿಮಯ ಕಾರ್ಯಕ್ರಮ

ಸರಕಾರಿ ಪ್ರೌಢ ಶಾಲೆ ಎಲಿಮಲೆ , ಶಾಲಾಭಿವೃದ್ದಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಸಿಸಿಆರ್ ಟಿ ಬಳಗ ಇದರ ಆಶ್ರಯದಲ್ಲಿ ದಿನಾಂಕ ನವಂಬರ್ 26, 2021 ಶುಕ್ರವಾರದಂದು ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ, ಪ್ರದರ್ಶನ, ಇನ್ಸೈರ್ ಅವಾರ್ಡ್ ನಾಮನಿರ್ದೇಶಿತ ವಿದ್ಯಾರ್ಥಿಗಳಿಗೆ ಹಾಗೂ ನೋಡಲ್ ಶಿಕ್ಷಕರಿಗೆ ವಿಜ್ಞಾನ ಮಾದರಿ ತಯಾರಿ ಬಗ್ಗೆ ತರಬೇತಿ ನಡೆಯಲಿದೆ....

ಸುಳ್ಯ : “ಮಂಡೆಬಿಸಿ” ಕಾಮಿಡಿ ಕಿರುಚಿತ್ರ ಬಿಡುಗಡೆ

ಸುಳ್ಯ ಬಾಯ್ಸ್ ಅರ್ಪಿಸುವ "ಮಂಡೆ ಬಿಸಿ" ಕನ್ನಡ ಕಾಮಿಡಿ ಕಿರುಚಿತ್ರ ಬಿಡುಗಡೆಗೊಂಡಿದೆ. https://youtu.be/gP6rNUoO8qo

ಜಯನಗರ : ಕಾಡಗುಡ್ಡೆಡ್ ಕಲ್ಲ್ ಕೊರಗಜ್ಜನ ಭಕ್ತಿ ಸುಗಿಪು ಬಿಡುಗಡೆ

ಸಂಕೇಶ ಪ್ರೊಡಕ್ಷನ್ ನಿರ್ಮಾಣದ ಕಾಡಗುಡ್ಡೆಡ್ ಕಲ್ಲ್ ಎಂಬ ಕೊರಗಜ್ಜನ ತುಳು ಭಕ್ತಿಗೀತೆಯು ನ.22 ರಂದು ಸುಳ್ಯ ಜಯನಗರದಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವಸ್ಥಾನ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಮಾಸ್ತರ್ ಹೊಸಗದ್ದೆ, ನಂದರಾಜ ಸಂಕೇಶ , ದೈವ ಪಾತ್ರಿ ಉಮೇಶ್ ಕುದ್ಪಾಜೆ ಹಾಗೂ ಊರ...
error: Content is protected !!