- Tuesday
- April 1st, 2025

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು ಇದರ ವತಿಯಿಂದ ಸದಸ್ಯರ ಖಾತೆಗೆ ಪ್ರಗತಿ ನಿಧಿ ವರ್ಗಾವಣೆ ಕಾರ್ಯಕ್ರಮ ಅನುಷ್ಠಾನ ಮಾಡಲಿದ್ದು ತಾಲೂಕಿನಲ್ಲಿ ಪ್ರಥಮ ಬಾರಿಗೆ ಗುತ್ತಿಗಾರು ವಲಯದಲ್ಲಿ ಗುತ್ತಿಗಾರು ಹಣ ಸಂಗ್ರಹ ಕೇಂದ್ರದಲ್ಲಿ ನಡೆಯಲಿದ್ದು ಇದರ ಅಂಗವಾಗಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಗುತ್ತಿಗಾರು ವಲಯ ಕಚೇರಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು...

ಮಾತೃಭೂಮಿ ಸೇವಾ ಟ್ರಸ್ಟ್(ರಿ.), ತುಮಕೂರು ಇವರು ಕೊಡಮಾಡುವ ರಾಷ್ಟ್ರಮಟ್ಟದ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಗೆ ಸಾಹಿತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಭಾಜನರಾಗಿದ್ದು ನ. 21ರಂದು ಮಾತೃಭೂಮಿ ಸೇವಾ ಟ್ರಸ್ಟ್(ರಿ.) ತುಮಕೂರು ಇದರ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಮಾನಿಕೆರೆ ಹತ್ತಿರ, ತುಮಕೂರು ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ...

ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಪುಳಿಮರಡ್ಕ ಮೋನಪ್ಪ ಗೌಡರ ಪುತ್ರಿ ಪೂರ್ಣಿಮಾರವರ ವಿವಾಹವು ಐರ್ವನಾಡು ಗ್ರಾಮದ ಬಾಂಜಿಕೋಡಿ ಗಣಪಯ್ಯ ಗೌಡರ ಪುತ್ರ ಹರೀಶ್ ರೊಂದಿಗೆ ನ.12ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾಬವನದಲ್ಲಿ ನಡೆಯಿತು.

ಗುತ್ತಿಗಾರಿನ ಸ್ವಾತಿ ಸಂಕೀರ್ಣದಲ್ಲಿ ನ.22 ರಂದು ಚಿಣ್ಣರ ಮನೆ ಶುಭಾರಂಭಗೊಳ್ಳಲಿದೆ. ಇಲ್ಲಿ 2 ವರ್ಷ ಮೇಲ್ಪಟ್ಟ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಸಂಸ್ಕಾರದೊಂದಿಗೆ ಆಟಪಾಟ ಕಲಿಕೆ, ಯೋಗ, ಸಾತ್ವಿಕ ಊಟ ಉಪಹಾರ ನೀಡಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಮಕ್ಕಳನ್ನು ಸೇರ್ಪಡೆಗೊಳಿಸಲಿಚ್ಚಿಸುವವರು ಸಂಪರ್ಕಿಸಬಹುದು ಮೊ :8073117026, 9480189590

ತೊಡಿಕಾನ ಗ್ರಾಮದ ಬಾಳೆಕಜೆ ಹೂವಪ್ಪ ಗೌಡರ ಪ್ರಥಮ ಪುತ್ರಿ ಹರ್ಷಿತಾ ರವರ ವಿವಾಹವು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪೆರುಮುಂಡ ಮುಕುಂದ ಗೌಡರ ಪುತ್ರ ಶಿವಕುಮಾರ ರೊಂದಿಗೆ ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನ.20ರಂದು ನಡೆಯಿತು.

ಬಾಳಿಲ ಗ್ರಾಮದ ಕಾಂಚೋಡು ಪುಟ್ಟಣ್ಣ ಗೌಡರ ಪುತ್ರ ಚಿ|ರಾ|ಲಕ್ಷ್ಮೀಶರ ವಿವಾಹವು ಪಂಬೆತ್ತಾಡಿ ಗ್ರಾಮದ ಕರಿಕ್ಕಳ ತಿಮ್ಮಪ್ಪ ಗೌಡರ ಪುತ್ರಿ ಚಿ|ಸೌ|ಪೂರ್ಣಿಮಾರೊಂದಿಗೆ ನ.21ರಂದು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ನಡೆಯಿತು.