- Thursday
- November 21st, 2024
ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ತಂಟೆಪ್ಪಾಡಿಯಲ್ಲಿ ಈ ಹಿಂದೆ ಅತಿಥಿ ಶಿಕ್ಷಕಿಯಾಗಿದ್ದ ನಿರ್ಮಲಾರನ್ನು ಮರುನೇಮಕ ಮಾಡದಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಗ್ರಾಮ ಪಂಚಾಯತಿನಿಂದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅಲ್ಲದೇ ಎಲ್ಲಾ ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸ್ವತಃ ಶಿಕ್ಷಣಾಧಿಕಾರಿಗಳನ್ನು ಭೇಟಿಮಾಡಿ ತಮ್ಮ...
ಬಳ್ಪ ಗ್ರಾಮದ ಕೊನ್ನಡ್ಕ ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ಹೊರಾಂಗಣದ ಶಾಶ್ವತ ಚಪ್ಪರ ನಿರ್ಮಾಣದ ಬಗೆಗಿನ ಸಾರ್ವಜನಿಕ ಮನವಿ ಬಿಡುಗಡೆ ಕಾರ್ಯಕ್ರಮ ನ.16 ರಂದು ನಡೆಯಿತು. ಈ ಮನವಿ ಪತ್ರವನ್ನು ಪ್ರಗತಿಪರ ಕೃಷಿಕರು ಹಾಗು ಕೊಡುಗೈ ದಾನಿ ಲಿಂಗಪ್ಪ ರೈ ಅರ್ಗುಡಿ ಬಿಡುಗಡೆಗೊಳಿಸಿ ರೂ.10,000 ಧನಸಹಾಯ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ...
ಗುತ್ತಿಗಾರಿನ ಕಂದ್ರಪ್ಪಾಡಿ ಕ್ರಾಸ್ ಬಳಿ ನ.14 ರಂದು ರಾತ್ರಿ ಅಮೂಲ್ಯ ದಾಖಲೆಗಳಿರುವ ಪರ್ಸ್ ಕಳೆದುಹೋಗಿದೆ. ಅದರಲ್ಲಿ ಹಣ ಹಾಗೂ ಅಮೂಲ್ಯ ದಾಖಲೆಗಳಿದ್ದು ಸಿಕ್ಕಿದವರು ದಯವಿಟ್ಟು ಹಿಂತಿರುಗಿಸಬೇಕಾಗಿ ಗುರುಪ್ರಸಾದ್ ಪೂಜಾರಿಕೋಡಿ (99728 62725) ವಿನಂತಿಸಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಪುತ್ತೂರು ಸಹಾಯ ಆಯುಕ್ತರಾದ ಯತೀಶ್ ಉಳ್ಳಾಲ್ ಅವರ ಅದ್ಯಕ್ಷತೆಯಲ್ಲಿ ನ.15 ರಂದು ನಡೆಯಿತು.ಈ ಸಂದರ್ಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ ಹಾಗೂ ವ್ಯವಸ್ಥಾಪನಾ ಸಮಿತಿಯ...
ದ.ಕ.ಜಿಲ್ಲಾ ಪೋಟೋಗ್ರಾಫರ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್. ಇಂದು ನಡೆದ ಜಿಲ್ಲಾ ಸಭೆಯಲ್ಲಿ ಆಯ್ಕೆಯಾದರು. ಇವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಾಂತಲಾ ಸ್ಟುಡಿಯೋ ನಡೆಸುತ್ತಿದ್ದಾರೆ. ಇವರು ಸುಬ್ರಮಣ್ಯ ರೋಟರಿ, ಜೇಸಿಐ, ಹಳೆವಿದ್ಯಾರ್ಥಿ ಸಂಘ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. (ವರದಿ : ಶ್ರೀದೇವಿ ವಿ ಹೆಗ್ಡೆ)
ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಗಡಿಕಲ್ಲು ಶ್ರೀ ಕೃಷ್ಣ ನಾಯ್ಕ ಅವರ ಪುತ್ರಿ ಸುಮಿತ್ರಾ ರವರ ವಿವಾಹವು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿಯ ದಿ. ಕೊರಗಪ್ಪ ನಾಯ್ಕರ ಪ್ರಥಮ ಪುತ್ರ ಯೋಗೀಶ್ ರವರೊಂದಿಗೆ ನ.11 ರಂದು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರು ಇಲ್ಲಿ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
ಕಾಣಿಯೂರು: ತುಳುನಾಡು ಶ್ರೇಷ್ಠ ಸಂಸ್ಕೃತಿ,ಸಂಸ್ಕಾರ ಹೊಂದಿರುವ ಪುಣ್ಯ ಭೂಮಿ.ಮೂವಪ್ಪೆಯಂತಹ ತೀರಾ ಹಿಂದುಳಿದ ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಊರಿನವರೆಲ್ಲರೂ ಸೇರಿಕೊಂಡು ಆಚರಿಸುತ್ತಿರುವುದು ಒಳ್ಳೆಯ ವಿಚಾರ ಎಂದು ಸವಣೂರು ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ಹೇಳಿದರು.ಅವರು ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಸ್ನೇಹಿತರ ಬಳಗ ಕಲ್ಪಡ,ಮೂವಪ್ಪೆ ಇದರ ಆಶ್ರಯದಲ್ಲಿ ಮೂವಪ್ಪೆ ಶಾಲಾ ಕ್ರೀಡಾಂಗಣದಲ್ಲಿ ನಡೆದ 5...
ಹರಿಹರ ಪಲ್ಲತಡ್ಕ ಹಿ.ಪ್ರಾ.ಶಾಲೆಯ ಶಿಕ್ಷಕರು ಪಾಠ ಪ್ರವಚನ ಸರಿಯಾಗಿ ಮಾಡುತ್ತಿಲ್ಲ, ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ, ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದು ಆರೋಪಿಸಿ ಮಕ್ಕಳು ಶಾಲೆಗೆ ಬರದೆ ಮನೆಯಲ್ಲೇ ಕೂತ ಘಟನೆ ವರದಿಯಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಇತರೇ ೨ ಶಿಕ್ಷಕರು ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಬಂದರೂ ತರಗತಿ ನಡೆಸುತ್ತಿಲ್ಲ, ಶಾಲೆಯಲ್ಲಿದ್ದರೂ ತರಗತಿಗೆ ಹಾಜರಾಗುವುದಿಲ್ಲ, ಮಕ್ಕಳಲ್ಲಿ ಬೇಧಭಾವ...
https://youtu.be/ihuD5HqmyCs ಅದ್ವೈತಂ ಕ್ರಿಯೇಷನ್ ವತಿಯಿಂದ ರಚಿಸಿರುವ ಅಮರ್ ಜಾಲ ಕೊರಗಜ್ಜ ಎಂಬ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿತು. ಇದಕ್ಕೆ ಮನೀಷ್ ಪ್ರಜ್ವಲ್ ಅವರ ಸಾಹಿತ್ಯದಲ್ಲಿ ಮೂಡಿಬಂದ ಹಾಡಿಗೆ ಚರಿಷ್ಮಾ ಕಾನಾವು ಅಡ್ಡನಪಾರೆ ಸ್ವರ ನೀಡಿದ್ದಾರೆ. ಚರಿಷ್ಮಾ ಇವರು ದೇವಚಳ್ಳ ಗ್ರಾಮದ ಅಡ್ಡನಪಾರೆ ಕಾನಾವು ರವೀಂದ್ರ ಮತ್ತು ಶ್ರೀಮತಿ ತಾರಾ ದಂಪತಿಗಳ ಪುತ್ರಿ.
Loading posts...
All posts loaded
No more posts