- Tuesday
- April 1st, 2025

ಸುಳ್ಯ ತಾಲ್ಲೂಕು ಉಬರಡ್ಕ ಮಿತ್ತೂರು ಗ್ರಾಮದ ಕಾಡುತೋಟ ಮನೆ (ಕೊರಂಬಡ್ಕ)ದೇರಣ್ಣ ಗೌಡರ ಪುತ್ರ ಚಿ. ರಾ.ರಮಾನಂದ ರ ವಿವಾಹವು ಕಡಬ ತಾಲ್ಲೂಕು ದೋಳ್ಪಾಡಿ ಗ್ರಾಮದ ಕೆಳಗಿನ ಮನೆ ತಿಮ್ಮಪ್ಪ ಗೌಡರ ಪುತ್ರಿ ಚಿ. ಸೌ.ಭವ್ಯ ರೊಂದಿಗೆ ನ.10 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಕಡಬ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ರೆಂಜಿಲಾಡಿ ಘಟಕದ ವತಿಯಿಂದ ಎಳುವಾಳೆಯಲ್ಲಿ ನ.14ರ ಆದಿತ್ಯವಾರದಂದು ಗೋ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು.ಆರಂಭದಲ್ಲಿ ಗೋ ಪೂಜೆ ಕಾರ್ಯಕ್ರಮ ನಡೆಯಿತು. ಗೋವುಗಳಿಗೆ ಪೂಜೆ ನೆರವೇರಿಸಿ ಪ್ರಸಾದ ನೀಡಲಾಯಿತು. ಅರ್ಚಕ ಕೃಷ್ಣ ಹೆಬ್ಬಾರ್ ವೈಧಿಕ ವಿಧಿ ವಿಧಾನ ನೆರವೇರಿಸಿದರು.ಪ್ರಮುಖ ಭಾಷಣ ನೆರವೇರಿಸಿದ ರಾಷ್ಟ್ರೀಯ ಸ್ವಯಂ ಸೇವಕ...

ಕಳಂಜ ಗ್ರಾಮದ ಪಾಂಡಿಪಾಲು ದುಗ್ಗಪ್ಪ ಗೌಡರ ಪುತ್ರಿ ಜಯಶ್ರೀ ಯವರ ವಿವಾಹ ನಿಶ್ಚಿತಾರ್ಥವು ಕಡಬ ತಾಲೂಕು ಸವಣೂರು ಗ್ರಾಮದ ಮಾಲೆತ್ತಾರು ದಿ|ಚೆನ್ನಪ್ಪ ಗೌಡರ ಪುತ್ರ ದಯಾನಂದ ರೊಂದಿಗೆ ನ.14ರಂದು ಅಯ್ಯನಕಟ್ಟೆಯ ಪಂಡಿತ್ ದೀನ್ ದಯಾಳ್ ಸಮುದಾಯ ಭವನದಲ್ಲಿ ನಡೆಯಿತು.

ಅಮರಪಡ್ನೂರು ಗ್ರಾಮದ ಕಲ್ಲುಮಲೆ ಪರಿಶಿಷ್ಟ ಜಾತಿ ಮನೆಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕೆಂಬ ಮನವಿಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು ಮತ್ತು ದಲಿತ ಮುಖಂಡೆ ಸರಸ್ವತಿ ಬೊಳಿಯಮಜಲು ರವರ ನೇತೃತ್ವದಲ್ಲಿ ಅಕ್ಟೋಬರ್ 16ರಂದು ಜಿಲ್ಲಾಧಿಕಾರಿಗಳ ಅಮರಮೂಡ್ನೂರು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಫಲಾನುಭವಿಗಳು ಮನವಿ ಸಲ್ಲಿಸಿದ್ದರು. ಸದರಿ ರಸ್ತೆಯು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ...

ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀಮತಿ ಸಾವಿತ್ರಿ ಮತ್ತು ಮೋಹನಕುಮಾರ ಗೌಡರ ಸುಪುತ್ರ ಮುರಳಿಕೃಷ್ಣ ಅವರ ವಿವಾಹ ನಿಶ್ಚಿತಾರ್ಥವು ಕಡಬ ತಾಲೂಕು ಎಡಮಂಗಲ ಗ್ರಾಮದ ನಾಗನಕಜೆ ಶ್ರೀಮತಿ ಉಮಾವತಿ ಮತ್ತು ನಾರ್ಣಪ್ಪ ಗೌಡರ ಪುತ್ರಿ ಸತ್ಯವತಿ(ಸರಿತಾ) ರೊಂದಿಗೆ ನ.14 ರಂದು ವಧುವಿನ ಮನೆಯಲ್ಲಿ ನಡೆಯಿತು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದಂತ ವೈದ್ಯ ಡಾ.ಮುರಲೀ ಮೋಹನ ಚೂಂತಾರು ಅವರನ್ನು ಫೆಲೋಶಿಪ್ ಗೆ ಆಯ್ಕೆ ಮಾಡಿದೆ.ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನದ ಜತೆಗೆ, ವಿಜ್ಞಾನಿಗಳು, ತಂತ್ರಜ್ಞರು ಮತ್ತು ವಿಜ್ಞಾನ ಸಂವಹನಕಾರರನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ.ವಿಜ್ಞಾನ,ತಂತ್ರಜ್ಞಾನ, ಕೃಷಿ,ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅ.29ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಫೆಲೋಶಿಪ್...
ಬಾಲ್ಯದಲ್ಲಿ ಮಕ್ಕಳ ದಿನವೆಂದರೆ ಹಬ್ಬದ ದಿನವಾಗಿರುವುದು ಅಕ್ಷರಶಃ ಸತ್ಯ .ಬೆನ್ನಿಗೆ ಹತ್ತು ಕೆಜಿಗೆ ಸಮಾನವಾದ ಬ್ಯಾಗ್ ಹಾಕಿ ಶಾಲೆಗೆ ನಡೆದಾಗ ಒಂದೊಮ್ಮೆ ರಜೆ ಸಿಗಲಿ ಎನ್ನುತ್ತಿದ್ದೆವು. ಮಕ್ಕಳಿಗಿಂತ ಬ್ಯಾಗ್ ಗಳ ತೂಕವೇ ಅಧಿಕವಾದರೆ ಅಂತಹ ಬ್ಯಾಗ್ ಇಲ್ಲದೆ ಶಾಲೆಗೆ ತೆರಳುವ ದಿನಗಳಲ್ಲಿ ಮಕ್ಕಳ ದಿನಾಚರಣೆಯು ಒಂದಾಗಿತ್ತು. ಸಮವಸ್ತ್ರ ಧರಿಸಿ ಕೈ ಬೀಸಿ ಬರುವಾಗ ಯಾರಾದರೂ ಬ್ಯಾಗ್...

ಐನೆಕಿದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನ.10 ರಂದು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ವತಿಯಿಂದ ಕ್ರೀಡಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸರಿತಾ, ಸಹ ಶಿಕ್ಷಕಿ ಕುಮಾರಿ, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಲಲಿತಾ ಗುಂಡಡ್ಕ ಹಾಗೂ ಗ್ರಾಮಪಂಚಾಯತ್ ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ಶ್ರೀಮತಿ ಭಾರತಿ ಮೂಕಮಲೆ ಹಾಗೂ ಎಸ್.ಡಿ.ಎಂ.ಸಿ...

ಗುತ್ತಿಗಾರು: ಇಲ್ಲಿನ ನಾಲ್ಕೂರು ಗ್ರಾಮದ ಸಮಾನ ಮನಸ್ಕರ ಯುವಕರ ತಂಡ ‘ಹೊಂಬೆಳಕು’ ನ.14ರಂದು ಅಸ್ವಿತ್ವಕ್ಕೆ ಬಂದಿತು. ‘ನಮ್ಮ ನಡಿಗೆ ಸ್ವಚ್ಛತೆಯ ಕಡೆಗೆ’ ಎಂಬ ಧ್ಯೇಯೋದ್ಧೇಶದೊಂದಿಗೆ ಪ್ರಾರಂಭವಾದ ತಂಡವನ್ನು ಕೃಷಿಕರಾದ ಎಂ.ಕೆ.ಮೋಹನ್ ಕುಮಾರ್ರವರು ತಂಡದ ಸದಸ್ಯರಿಗೆ ಸಮವಸ್ತ್ರ ನೀಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ತಂಡವು ಗ್ರಾಮದ ಬಸ್ಸು ತಂಗುದಾಣ, ಶಾಲೆ ಹಾಗೂ ಇನ್ನಿತರ ಸರ್ಕಾರಿ ಸ್ವಾಮ್ಯದ...

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ ಇದರ ಸುವಿಚಾರ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆಯನ್ನು ಸಾಹಿತ್ಯ ಸಂವಾದವನ್ನು ನಡೆಸುವುದರ ಮೂಲಕ ನೀಡಲಾಯಿತು. ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇದರ ಪ್ರೌಢಶಾಲಾ ವಿಭಾಗದ ಆಂಗ್ಲಭಾಷಾ ಶಿಕ್ಷಕಿ ಶ್ರೀಮತಿ ಪ್ರೇಮಾ ಉದಯಕುಮಾರ್ ಇವರು ವಿದ್ಯಾರ್ಥಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ ಮೊದಲು ಉತ್ತಮ ಸಾಹಿತ್ಯಗಳನ್ನು ಆಲಿಸುವ, ವಿಚಾರಗಳ ಬಗ್ಗೆ ಮಾತನಾಡುವ,...

All posts loaded
No more posts