
ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವರ “ಹರಿ ಹರ ಸುಪ್ರಭಾತ” ಎಂಬ ಭಕ್ತಿಗೀತೆಯು ನ.02 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನರಸಿಂಹ ಭಟ್ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಯಂತ್ ನಾಯ್ಕ ಎಲ್ಲಪಡ್ಕ, ಗಿರೀಶ್ ಕಾಂತುಕುಮೇರಿ, ಸಂತೋಷ್ ನಾಯ್ಕ ಗಡಿಕಲ್ಲು, ಶ್ರೀಕಾಂತ್ ಪಂಜ, ಗಣೇಶ್ ಮಂಚಿಕಟ್ಟೆ, ರಾಮಣ್ಣ ಮಂಚಿಕಟ್ಟೆ, ದಯಾನಂದ ಏನೆಕಲ್ಲು, ಜಯಕುಮಾರ್ ಕಲ್ಲೇರಿಕಟ್ಟ, ಮೋಹನ್ ದಾಸ್ ಕಲ್ಲೇರಿಕಟ್ಟ, ನೇಮಿಚಂದ್ರ ದೋಣಿಪಳ್ಳ, ಹವೀನ್ ಕುಕ್ಕುಂದ್ರಡ್ಕ, ವಿನೀತ್ ಚೀಮುಳ್ಳು, ಸುಮಿತ್ರಾ ನಾಯ್ಕ ಗಡಿಕಲ್ಲು, ಸೌಮ್ಯ ನಾಯ್ಕ ತಳಂಜೆ, ಶ್ರವಣ್ ಪಂಜ, ನವೀನ್ ಹರಿಹರ, ಹೇಮಂತ್ ಎಲ್ಲಪಡ್ಕ, ಗೋಪಾಲ ಗೋರ್ತಿಲ, ದೇವಸ್ಥಾನದ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಭಕ್ತಿಗೀತೆಯನ್ನು ಹರಿಹರೇಶ್ವರ ದೇವಸ್ಥಾನದ ಅರ್ಚಕರಾದ ಬಿ.ಕೃಷ್ಣಕುಮಾರ್ ದೇವರಗದ್ದೆ ಅವರ ಮಾರ್ಗದರ್ಶನದಲ್ಲಿ ಪಂಚವರ್ಣ ಖ್ಯಾತಿಯ ರಕ್ಷಿತ್ ಮಂಚಿಕಟ್ಟೆ ಬರೆದು, ಪವಿತ್ರ ಮಯ್ಯ ಹಾಡಿದ್ದಾರೆ. ಈ ಹಾಡಿನ ದ್ವನಿ ಮುದ್ರಣವನ್ನು ರಾಜ್ ಮ್ಯೂಸಿಕ್ ವಲ್ಡ್ ಕಡಬ ಇಲ್ಲಿ ಮಾಡಲಾಗಿದೆ.
ವರದಿ :- ಉಲ್ಲಾಸ್ ಕಜ್ಜೋಡಿ