
ಸದಾಸಿದ್ಧಿ ಮಿತ್ರ ಬಳಗ (ರಿ.) ಬೀದಿಗುಡ್ಡೆ ಇದರ ವತಿಯಿಂದ 18 ನೇ ವರ್ಷದ ದೀಪಾವಳಿ ಹಬ್ಬದ ಪ್ರಯಕ್ತ ಸಾರ್ವಜನಿಕರಿಗೆ ಬೀದಿಗುಡ್ಡೆ ಶಾಲಾ ವಠಾರದಲ್ಲಿ ಕ್ರೀಡಾಕೂಟ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಕುಸುಮ ಎಸ್ ರೈ ಹೊಸಮನೆ ಅಧ್ಯಕ್ಷರು ಗ್ರಾಮ ಪಂಚಾಯತ್ ಬಳ್ಪ ನೆರವೇರಿಸಿದರು. ಶ್ರೀ ದೀಕ್ಷಿತ್ ಅಧ್ಯಕ್ಷರು ಸದಾಸಿದ್ಧಿ ಮಿತ್ರ ಬಳಗ (ರಿ.) ಬೀದಿಗುಡ್ಡೆ ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಶ್ರೀಮತಿ ಕುಸುಮಾವತಿ ಎಣ್ಣೆಮಜಲು ಮುಖ್ಯೋಪಾಧ್ಯಾಯರು ಸ.ಕಿ.ಪ್ರಾ ಶಾಲೆ ಸಂಪ್ಯಾಡಿ ಮತ್ತು ಶ್ರೀ ತೀರ್ಥೆಶ್ ಆಚಾರ್ಯ ಬೀದಿಗುಡ್ಡೆ ಕಾರ್ಯದರ್ಶಿಗಳು ಸದಾಸಿದ್ಧಿ ಮಿತ್ರ ಬಳಗ (ರಿ.) ಬೀದಿಗುಡ್ಡೆ ಉಪಸ್ಥಿತರಿದ್ದರು.ಆದರ್ಶ ಕಟ್ಟ ಸ್ವಾಗತಿಸಿ ಜಸ್ವಂತ್ ಧನ್ಯವಾದಗೈದರು. ನಂತರ ಸ್ಥಳೀಯ ಶಾಲಾ ಮಕ್ಕಳಿಗೆ ಅಟೋಟ ಸ್ಪರ್ಧೆಗಳು ಮತ್ತು ಸಾರ್ವಜನಿಕರಿಗೆ ಹಗ್ಗಜಗ್ಗಾಟ ವಾಲಿಬಾಲ್ ಪಂದ್ಯಾಟ ನಡೆಸಲಾಯಿತು.