ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಂಟಾರು ರವೀಶ ತಂತ್ರಿಯವರು ನ.01 ರಂದು ಕೊಲ್ಲಮೊಗ್ರು ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಕೊಲ್ಲಮೊಗ್ರು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ OBC ಕೋಶಾಧಿಕಾರಿಗಳಾದ ಮಾಧವ ಚಾಂತಾಳ, ಕೊಲ್ಲಮೊಗ್ರು ಬಿಜೆಪಿ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಉದಯ ಶಿವಾಲ, ಚಂದ್ರಶೇಖರ ಕೊಂದಾಳ, ಕೊಲ್ಲಮೊಗ್ರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾದ ರವೀಶ್ ಅಣಾಜೆ, ಜಗದೀಶ್ ಪನ್ನೆ, ಪುರುಷೋತ್ತಮ ಗಡಿಕಲ್ಲು, ಅವಿನ್ ಪನ್ನೆ, ವಿಶ್ವನಾಥ ಪನ್ನೆ ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ