- Tuesday
- April 1st, 2025

ಕೋಟಿ ಹೃದಯಗಳ ಪ್ರಾರ್ಥನೆ ಹುಸಿಯಾಯಿತು…ಕೋಟಿ ಮನಸುಗಳ ಆಸೆಯು ಹುಸಿಯಾಯಿತು, ಇಂದು ಹುಸಿಯಾಯಿತು…ಪ್ರೀತಿ-ಸ್ನೇಹದ "ಅರಸು" ಮರೆಯಾದನು, ಇಂದು ಮರೆಯಾದನು…"ದೊಡ್ಮನೆ"ಯ "ಬೆಟ್ಟದ ಹೂವು" ಮರೆಯಾಯಿತು "ಆಕಾಶ"ದಲ್ಲಿ ಮರೆಯಾಯಿತು… ವಿಧಿಯ ಆಟದ ಎದುರು ಎಲ್ಲಾ ಶೂನ್ಯವಾಯಿತು, ಎಲ್ಲಾ ಮುಗಿದು ಹೋಯಿತು…ಯಾರ ಊಹೆಗೂ ನಿಲುಕದ ಘಟನೆ ನಡೆದುಹೋಯಿತು, ನಮ್ಮೆದುರು ನಡೆದು ಹೋಯಿತು…ಮರಳಿ ಬಾರದ ಲೋಕಕೆ ಹೊರಟು ಹೋದನು "ವಂಶಿ", ಆ "ಪರಮಾತ್ಮ"ನ...

ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಂಟಾರು ರವೀಶ ತಂತ್ರಿಯವರು ನ.01 ರಂದು ಕೊಲ್ಲಮೊಗ್ರು ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಕೊಲ್ಲಮೊಗ್ರು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ OBC ಕೋಶಾಧಿಕಾರಿಗಳಾದ ಮಾಧವ ಚಾಂತಾಳ, ಕೊಲ್ಲಮೊಗ್ರು ಬಿಜೆಪಿ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಉದಯ ಶಿವಾಲ, ಚಂದ್ರಶೇಖರ...

ಸುಳ್ಯ ಗಾಂಧಿನಗರ ನಾವೂರು ನಿವಾಸಿ ಧನಂಜಯ ಕೆ. ಟೈಲರ್ ರವರು ನ.1 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.ಅವರು ಗಾಂಧಿನಗರ ಮಸೀದಿ ಬಳಿ ಹಲವಾರು ವರ್ಷಗಳ ಕಾಲ ಕಟ್ಲೆರಿ ಅಂಗಡಿಯನ್ನು ನಡೆಸುತ್ತಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಗಾಂಧಿನಗರದಲ್ಲಿದ್ದ ಉದ್ಯಮವನ್ನು ಸ್ಥಳಾಂತರಿಸಿ ರಥಬೀದಿಯಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು. ಅಮರಸುದ್ದಿ ಪತ್ರಿಕೆಯ ಏಜೆಂಟರಾಗಿದ್ದರು. ಒಂದು ಅವಧಿಗೆ ಸುಳ್ಯ...

ದಿ. 30/10/2021 ರಂದು ಭಾನುವಾರ ಸುಳ್ಯದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ಪವಿತ್ರಾ- ಗುಣಪಾಲ ಇವರ ವಿವಾಹ ಸಮಾರಂಭದಲ್ಲಿ ಚೈನೊಂದು ಬಿದ್ದುಸಿಕ್ಕಿರುತ್ತದೆ. ಕಳೆದುಕೊಂಡವರು ಸರಿಯಾದ ವಿವರವನ್ನು ತಿಳಿಸಿ ಪಡೆದುಕೊಳ್ಳಲು ವಿನಂತಿಸಲಾಗಿದೆ. ಸಂಪರ್ಕಿಸಬೇಕಾದ ಸಂಖ್ಯೆ 8971308355, 6362414844, 9482384692

ಐವರ್ನಾಡಿನ ಮುಚ್ಚಿನಡ್ಕ ಶಿವಕೃಪಾ ಆಯಿಲ್ ಮಿಲ್ ಹತ್ತಿರ ರೇಣುಕಾಪ್ರಸಾದ್ ಚಾಕೋಟೆ ಮಾಲಕತ್ವದಲ್ಲಿ ಆರ್.ಪಿ.ಚಿಕನ್ ಸೆಂಟರ್ ನ.03(ನಾಳೆ) ಬುಧವಾರದಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಬಾಯ್ಲರ್, ಟೈಸನ್, ಗಿರಿರಾಜ, ಊರುಕೋಳಿ ಹಾಗೂ ಮೊಟ್ಟೆ ರಖಂ ಹಾಗೂ ಚಿಲ್ಲರೆ ದರದಲ್ಲಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

ಯುಗಪುರುಷ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾನುಗ್ರಹದೊಂದಿಗೆ ಆದರಣೀಯ ಡಿ.ಹರ್ಷೇಂದ್ರ ಕುಮಾರ್ ಅವರ ಶುಭಾಶಯಗಳೊಂದಿಗೆ ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ ನ.01ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ಜರುಗಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮ ಮುಖ್ಯ ಅತಿಥಿ ಅಭ್ಯಾಗತರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು....

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ 66ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಮಾಡಿ ಶುಭ ಹಾರೈಸಿದ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್ ಕನ್ನಡವನ್ನು ಉಳಿಸಿ ಬೆಳೆಸಿ ಎಂದರು. ಮುಖ್ಯಶಿಕ್ಷಕರಾದ ಯಶೋಧರ ಎನ್ ಶುಭಹಾರೈಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಸಾದ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅಧ್ಯಾಪಕ ವೃಂದದವರು, ಸಿಬ್ಬಂದಿ ವರ್ಗದವರು, ಸ್ಕೌಟ್...