Ad Widget

ಪತ್ರಕರ್ತರ ಸಮುದಾಯ ಭವನದ ಕಾಮಗಾರಿಗೆ ಡಾ.ಕೆ.ವಿ.ಚಿದಾನಂದರಿಂದ ಚಾಲನೆ

ಸುಳ್ಯ ತಾಲೂಕು ಪಂಚಾಯತ್ ವತಿಯಿಂದ ಅಂಬೆಟಡ್ಕದಲ್ಲಿ ನೀಡಿರುವ 5 ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗಲಿರುವ ಪತ್ರಕರ್ತರ ಸಮುದಾಯ ಭವನ ‘ಪ್ರೆಸ್ ಕ್ಲಬ್ ‘ ಕಟ್ಟಡದ ಕಾಮಗಾರಿ ಇಂದು ಚಾಲನೆ ನೀಡಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ದೀಪ ಬೆಳಗಿಸಿ, ಅಡಿಪಾಯಕ್ಕೆ ಶಿಲೆ ಇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಎಲ್ಲರ ಸಹಕಾರದಲ್ಲಿ ಪತ್ರಕರ್ತರ ಸಮುದಾಯ ಭವನ ಆದಷ್ಟು ಶೀಘ್ರ ನಿರ್ಮಾಣವಾಗಲಿ ಅವರು ಶುಭ ಹಾರೈಸಿದರು. ಮನವಿ ಪತ್ರವನ್ನು ಬಿಡುಗಡೆ ಮಾಡಿ ಮಾತಾನಾಡಿದ ಬೆಳ್ಳಾರೆಯ ಕಾಮಧೇನು ಗ್ರೂಪ್ಸ್ ನ ಮಾಲಕ ಎಂ.ಮಾಧವ ಗೌಡ ಬೆಳ್ಳಾರೆ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುವ ಸುಳ್ಯ ತಾಲೂಕಿನ ಪತ್ರಕರ್ತರ ಚಟುವಟಿಕೆಗಳಿಗೆ ಪ್ರೆಸ್ ಕ್ಲಬ್ ನಿರ್ಮಾಣ ಅತೀ ಅಗತ್ಯವಾಗಿದೆ. ಎಲ್ಲರ ಸಹಕಾರದಲ್ಲಿ ಅತೀ ಶೀಘ್ರದಲ್ಲಿ ಪ್ರೆಸ್ ಕ್ಲಬ್ ಕಟ್ಟಡ ಪೂರ್ತಿಯಾಗಲಿ ಎಂದು ಹೇಳಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ ಪತ್ರಕರ್ತರ ಸಮುದಾಯ ಭವನ ನಿರ್ಮಣಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಉದ್ಯಮಿ ಇಬ್ರಾಹಿಂ ಕತ್ತರ್ ಮಂಡೆಕೋಲು, ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಶೀಲಾ ಅರುಣ ಕುರುಂಜಿ ಶುಭ ಹಾರೈಸಿದರು. ಕಟ್ಟಡ ನಿರ್ಮಾಣದ ಗುತ್ತಿಗೆದಾರ ಲಿಟ್ಲ್ ಫ್ಲವರ್ ಸಂಸ್ಥೆಯ ನೆಲ್ಸನ್, ಪತ್ರಕರ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading