ಅಯ್ಯನಕಟ್ಟೆ ಬಳಿಯ ಚೊಕ್ಕಾಡಿ-ಸುಳ್ಯ ತಿರುವಿನಲ್ಲಿ ರಸ್ತೆಯ ದುಸ್ಥಿತಿಯಿಂದ ಅಪಾಯ ಎದುರಾಗುವ ಭೀತಿ ಉಂಟಾಗಿದೆ. ಅಸಮರ್ಪಕ ಮೋರಿ ವ್ಯವಸ್ಥೆಯಿಂದ ರಸ್ತೆಯ ಎರಡೂ ಬದಿಗಳಲ್ಲಿ ಗುಂಡಿಗಳಾಗಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ಎಚ್ಚರವಹಿಸದಿದ್ದರೆ ಅಪಾಯ ಎದುರಾಗುವುದು ಖಂಡಿತ.
ಈ ರಸ್ತೆ ಚೊಕ್ಕಾಡಿ ಮೂಲಕ ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಹಿಂದೆಯೇ ಇಲ್ಲಿ ರಸ್ತೆಯ ಸಮಸ್ಯೆ ಎದುರಾಗಿತ್ತಾದರೂ ಆ ಸಂದರ್ಭದಲ್ಲಿ ಮಣ್ಣು ಹಾಕಿ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಇಂತಹ ದುರಸ್ತಿ ಕಾರ್ಯ ತಾತ್ಕಾಲಿಕವಾಗಿದ್ದು ರಸ್ತೆಗೆ ಶಾಶ್ವತವಾದ ಪರಿಹಾರಕ್ಕಾಗಿ ಊರವರು ಆಗ್ರಹಿಸಿದ್ದಾರೆ.