ಭಾರತ ದೇಶವನ್ನು 2025 ಕ್ಕೆ ಕ್ಷಯ ಮುಕ್ತಗೊಳಿಸುವ ಪ್ರಧಾನಿಯವರ ಆಶಯದಂತೆ ಸಂಪಾಜೆ ಗ್ರಾಮ ಪಂಚಾಯತನ್ನು ಕ್ಷಯ ಮುಕ್ತಗೊಳಿಸಲು ಟಾಸ್ಕ್ ಪೋರ್ಸ್ ಸಮಿತಿ ರಚನಾ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾಹುಲ್ ಹಮೀದ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಆರೋಗ್ಯ ಇಲಾಖೆಯ ಕ್ಷಯ ವಿಭಾಗದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿ ಕ್ಷಯರೋಗದ ಲಕ್ಷಣಗಳಿರುವವರನ್ನು ಶೀಘ್ರವಾಗಿ ಪರೀಕ್ಷೆ ಮಾಡಿಸಿ ಕ್ಷಯರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಿದಲ್ಲಿ ರೋಗ ಹರಡುವುದನ್ನು ತಪ್ಪಿಸಬಹುದು ಮತ್ತು ರೋಗಿಯನ್ನು ಗುಣಪಡಿಸಬಹುದು ಎಂದರು ಹಾಗೂ ಟಾಸ್ಕ್ ಪೋರ್ಸ್ ಸಮಿತಿಯ ಅಗತ್ಯತೆಯ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪವನ್ ಕುಮಾರ್ ಉಪಸ್ಥಿತರಿದ್ದು ಎಲ್ಲರ ಸಹಕಾರದಿಂದ ಕ್ಷಯ ಮುಕ್ತ ಮಾಡಲು ಸಾಧ್ಯವಿದ್ದು ಎಲ್ಲರ ಸಹಕಾರವನ್ನು ಕೋರಿದರು.
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಓಲ್ಗಾ ಡಿಸೋಜಾ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ , ಪಂಚಾಯತ್ ಸದಸ್ಯರಾದ ಸೋಮಶೇಖರ ಕೊಯಿಂಗಾಜೆ , ಹಮೀದ್. ಎಸ್. ಕೆ, ಎ.ಎನ್. ವಿಜಯ , ಶಾವದ್ ಜಿ.ಎಂ , ಕೆ.ಆರ್.ಜಗದೀಶ , ಸುಶೀಲಾ, ಅನುಪಮ.ಜಿ , ವಿಮಲ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಭಾಗೀರಥಿ.ಕೆ , ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಪ್ಪ ಜಿ. ಎಸ್, ಆಶಾ ಕಾರ್ಯಕರ್ತೆಯರಾದ ಸೌಮ್ಯ, ಪ್ರೇಮಲತಾ, ಮೋಹನಾಂಗಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಓಲ್ಗಾ ಡಿಸೋಜ ಸ್ವಾಗತಿಸಿ ವಂದಿಸಿದರು.