ಸುಬ್ರಹ್ಮಣ್ಯ: ಕಡಬ ತಾಲೂಕಿನ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿದ್ದು, ಸ್ಥಳದಲ್ಲಿದ್ದವರ ತುರ್ತು ಕಾರ್ಯಚರಣೆಯಿಂದ ಬಾರೀ ದುರಂತ ತಪ್ಪಿದ ಘಟನೆ ಅ.25ನೇ ಸೋಮವಾರ ಸಂಭವಿಸಿದೆ.
ನೂಜಿಬಾಳ್ತಿಲ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಅಡುಗೆ ಮಾಡುವ ಕೊಠಡಿಯಲ್ಲಿ ಗ್ಯಾಸ್ ಉರಿಸುವ ಸಂದರ್ಭದಲ್ಲಿ ಗ್ಯಾಸ್ ಅಂಡೆಯ ಪೈಪ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿದೆ. ಕೂಡಲೇ ಸ್ಥಳದಲ್ಲಿದ್ದವರು ಕಾರ್ಯ ಪ್ರವೃತರಾಗಿ ಅಪಾಯ ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಿದ್ದಾರೆ. ಗ್ರಾ.ಪಂ ಸಿಬ್ಬಂದಿ ಧನರಾಜ್, ಜಯಪ್ರಕಾಶ್ ಶಾಂತಿಗುರಿ, ಪ್ರಸಾದ್ ಜಾಲು ಅವರು ಕಿಟಕಿ ಮೂಲಕ ಬೆಂಕಿ ನಂದಿಸುವ ಉಪಕರಣ ಸಹಾಯದಿಂದ ಬೆಂಕಿ ನಂದಿಸಿ, ಹೆಚ್ಚಿನ ಅಪಾಯ ಸಂಭವಿಸದಂತೆ ಮಾಡಿದರು. ಘಟನೆಯಲ್ಲಿ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಡಬ ಪೊಲೀಸರು ಬೇಟಿ ನೀಡಿ ಮಾಹಿತಿ ಪಡೆದರು. ಅಡುಗೆ ಸಿಬ್ಬಂದಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಸಮಿತಿಯವರು, ಪೋಷಕರು, ನೂಜಿಬಾಳ್ತಿಲ ಗ್ರಾ.ಪಂ.ನವರು, ಸ್ಥಳೀಯರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಯಾವುದೇ ಅಪಾಯ ಸಂಭವಿಸದಂತೆ ಕ್ರಮಕೈಗೊಂಡಿದ್ದಾರೆ. ಸಮಸ್ಯೆ ಉಂಟಾದ ಗ್ಯಾಸ್ ಅಂಡೆಯನ್ನು ಬದಲಾಯಿಸಲಾಗಿದೆ.
ವರದಿ :- ಉಲ್ಲಾಸ್ ಕಜ್ಜೋಡಿ