ಯುಗಪುರುಷ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾನುಗ್ರಹದೊಂದಿಗೆ ಆದರಣೀಯ ಡಿ.ಹರ್ಷೇಂದ್ರ ಕುಮಾರ್ ಅವರ ಶುಭಾಶಯಗಳೊಂದಿಗೆ ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ಅರ್ಪಿಸುವ ಯಕ್ಷಗಾನ ಪ್ರದರ್ಶನ ಕೃಷ್ಣಲೀಲೆ-ವೀರ ಅಭಿಮನ್ಯು ಹಾಗೂ ಯೋಧನಮನ ಕಾರ್ಯಕ್ರಮ ನ.01ರಂದು ಕೋಟೆಮುಂಡುಗಾರು ಶಾಲಾ ವಠಾರದಲ್ಲಿ ಜರುಗಲಿದೆ. ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್.ಕೆ.ಭಟ್ ಬೆಳ್ಳಾರೆ, ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಸುಳ್ಯ ತಾಲೂಕು ಅ.ಕ.ಜ.ಜ. ವೇದಿಕೆಯ ವಿಶ್ವನಾಥ ರೈ ಕಳಂಜ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕರಾದ ಗಿರೀಶ್ ಹೆಗ್ಡೆ ಧರ್ಮಸ್ಥಳ, ಕಳಂಜ ಗ್ರಾ.ಪಂ. ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕಿಲಂಗೋಡಿ, ಕೋಟೆಮುಂಡುಗಾರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ ತೋಟದಮೂಲೆ, ಕಳಂಜ ಯುವಕ ಮಂಡಲದ ಅಧ್ಯಕ್ಷ ಶಿವರಾಮ ಕಜೆಮೂಲೆ ಇರಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಯೋಧರಿಗೆ ಗೌರವಾರ್ಪಣೆ ಸಲುವಾಗಿ ‘ಯೋಧನಮನ’ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಲೀಲೆ-ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾರ್ಯಕ್ರಮದ ವ್ಯವಸ್ಥಾಪಕ ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ಗೌತಮ್ ಶೆಟ್ಟಿ ಬೆಳ್ಳಾರೆ ವಿನಂತಿಸಿದ್ದಾರೆ.
- Thursday
- November 21st, 2024