ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಅನುರಾಧಾ ಕುರುಂಜಿಯವರಿಂದ ಮಡಿಕೇರಿ ಆಕಾಶವಾಣಿಯಲ್ಲಿ ಡಾ. ಕುರುಂಜಿ ವೆಂಕಟರಮಣ ಗೌಡೆರ ಕುರಿತು ಸರಣಿ ಕಾರ್ಯಕ್ರಮ ನಡೆಯಲಿದೆ. ಮಡಿಕೇರಿ ಆಕಾಶವಾಣಿಯು ಡಾ. ಕುರುಂಜಿ ವೆಂಕಟರಮಣ ಗೌಡರ ಜೀವನ ಮತ್ತು ಸಾಧನೆ ಕುರಿತು ಅರೆಭಾಷೆಯಲ್ಲಿ ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದು, ಮೊದಲ ಹಂತದ ಕಾರ್ಯಕ್ರಮವನ್ನು ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಲಿದ್ದಾರೆ. ದಿನಾಂಕ 24- 10 – 2021ರ ಆದಿತ್ಯವಾರ ಸಂಜೆ 7.50ಕ್ಕೆ “ಡಾ. ಕುರುಂಜಿಯವರ ಬಾಲ್ಯದ ದಿನಗ” ವಿಷಯದ ಕುರಿತು ಮಾತನಾಡಲಿದ್ದಾರೆ. 31-10-2021ರ ಆದಿತ್ಯವಾರ ಸಂಜೆ 7.50 ಕ್ಕೆ “ಛಲಗಾರ ಮತ್ತ್ ದೂರದರ್ಶಿತ್ವದ ಡಾ. ಕುರುಂಜಿಯವು” ಹಾಗೂ 07-11-2021ರ ಆದಿತ್ಯವಾರ ಸಂಜೆ 7.50 ಕ್ಕೆ “ಶಿಕ್ಷಣ ಸಂಸ್ಥೆಗಳ ರೂವಾರಿಯಾಗಿ ಡಾ. ಕುರುಂಜಿವು” ವಿಷಯಗಳ ಕುರಿತು ಮಾತನಾಡಲಿದ್ದಾರೆ. ಇವರು ಈಗಾಗಲೇ ಮಂಗಳೂರು ಹಾಗೂ ಮಡಿಕೇರಿ ಆಕಾಶವಾಣಿಗಳಲ್ಲಿ ಹಲವು ಬಾರಿ ಕವನ ವಾಚನ ಹಾಗೂ ಭಾಷಣ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿರುತ್ತಾರೆ. ಇದೀಗ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಾಯೋಜಿಸಿರುವ ಈ ಕಾರ್ಯಕ್ರಮವನ್ನು FM 103.1MHz (ಆಕಾಶವಾಣಿ ಮಡಿಕೇರಿ) ಕಂಪನಾಂಕದಲ್ಲಿ ಆಲಿಸಬಹುದು.
- Thursday
- November 21st, 2024