ಅಮರ ಮುಡ್ನೂರು ಗ್ರಾಮದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಬಳಿ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಬೋರ್ ವೇಲ್ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಅವರ ಗ್ರಾಮ ವಾಸ್ತವ್ಯದ ಸಂದರ್ಭ ಅಹವಾಲು ಸ್ವೀಕರಿಸಿದ ಸಂದರ್ಭ ಜನರು ಡಿ.ಸಿ ಅವರನ್ನು ಆಗ್ರಹಿಸಿದರು.
ಕೆಲ ಸಮಸ್ಯೆಗಳು ಇನ್ನೂ ಪರಿಹಾರವಾಗದಕ್ಕೆ ತಾಲೂಕು ಅಧಿಕಾರಿಗಳನ್ನು ಡಿಸಿ ಅವರು ತರಾಟೆಗೆ ತೆಗೆದುಕೊಂಡರು.
ಜನರ ಸಮಸ್ಯೆಗಳ ಕುರಿತು ಮುಂದಿನ ೨ ವಾರಗಳ ಒಳಗೆ ಅಧಿಕಾರಿಗಳು ಪರಿಹಾರ ನೀಡಬೇಕು. ಪರಿಹಾರ ಸಾಧ್ಯವಾಗದಿದ್ದರೆ ಅದರ ಕಾರಣವನ್ನು ವರದಿ ಮಾಡಬೇಕು ಎಂದು ಡಿಸಿ ಸೂಚಿಸಿದರು.
ವಿದ್ಯುತ್ ಸಮಸ್ಯೆಯ ಕುರಿತು ಪ್ರತ್ಯೇಕವಾಗಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಹಿರಿಯ ಗ್ರಾಮಸ್ಥರಾದ ಸತ್ಯ ನಾರಾಯಣ ಅವರು ಗ್ರಾಮದ ಮೂಲ ಸಮಸ್ಯೆಗಳು ಹಾಗೂ ಅದರ ಕುರಿತ ಅಧಿಕಾರಿಗಳು ತೋರಿದ ನಿರ್ಲಕ್ಷಗಳ ಕುರಿತು ಡಿ.ಸಿ ಅವರ ಗಮನಸೆಳೆದರು. ಇದಕ್ಕೆ ಗ್ರಾಮಸ್ಥರು ಕರತಾಡನದ ಮೂಲಕ ಬೆಂಬಲ ಸೂಚಿಸಿದರು.