

ವಳಲಂಬೆಯಲ್ಲಿ ಕಳೆದ 5 ವರ್ಷಗಳಿಂದ ಸೇವೆ ನೀಡುತ್ತಿರುವ ಶಂಖಶ್ರೀ ಅಟೋ ವರ್ಕ್ಸ್ ಸ್ಥಳಾಂತರ ಗೊಂಡ ವಳಲಂಬೆ ದೇವಸ್ಥಾನದ ಸಮೀಪ ಶುಭಾರಂಭಗೊಂಡಿತು. ಗಣಪತಿ ಹವನ, ನವರಾತ್ರಿ ಅಂಗವಾಗಿ ಆಯುಧ ಪೂಜೆ, ವಾಹನ ಪೂಜೆ ನೆರವೇರಿತು. ಮಾಲಕರಾದ ರಿತೇಶ್ ಬಿ. ಪೈಕ ಸ್ವಾಗತಿಸಿ, ವಂದಿಸಿದರು. ವೆಂಕಟ್ ವಳಲಂಬೆ, ದುರ್ಗೇಶ್ ಮಣಿಯಾನ, ದೇವಣ್ಣ ಗೌಡ ವಳಲಂಬೆ, ಕುಮಾರ ಅಡ್ಡನಪಾರೆ, ಚಿದಾನಂದ ಅಡ್ಡನಪಾರೆ, ಭುವನೇಶ್ವರ ಪೈಕ ಮತ್ತಿತರರು ಉಪಸ್ಥಿತರಿದ್ದರು.