

ಯುವ ಉದ್ಯಮಿ ಅಜಿತ್ ಬನ್ನೂರು ಅವರು ಪೇರಾಲುವಿನಲ್ಲಿ ಸ್ಥಾಪಿಸಿದ ಹಾಳೆ ತಟ್ಟೆ ತಯಾರಿಕಾ ಘಟಕ ಬಯೋ ಟ್ರೆಂಡ್ಸ್ ಫುಡ್ ವೇರ್ಸ್ ಇದರ ಉದ್ಘಾಟನಾ ಸಮಾರಂಭ ಸೆ 14ರಂದು ನಡೆಯಿತು.
ಕಾರ್ಯಕ್ರಮವನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜನಸೇವಾ ವಿಶ್ವಸ್ಥ ಮಂಡಳಿ,ಜನಸೇವಾ ವಿದ್ಯಾಕೇಂದ್ರದ ಪ್ರಧಾನ ಕಾರ್ಯದರ್ಶಿ ಅ.ಸ. ನಿರ್ಮಲ ಕುಮಾರ್, ನಿವೃತ್ತ ವಾಯು ಸೇನಾ ಅಧಿಕಾರಿ ಅಡ್ಡಂತಡ್ಕ ದೇರಣ್ಣ ಗೌಡ, ಕ್ಯಾಂಪ್ಕೋ ದ ನಿವೃತ್ತ ಮ್ಯಾನೇಜರ್ ಜನಾರ್ಧನ ಪದೇಲ ಉಪಸ್ಥಿತರಿದ್ದರು.
ಡಾ. ರಜನಿ ಪ್ರಾರ್ಥಿಸಿದರು. ಉದ್ಯಮದ ಸ್ಥಾಪಕ ಅಜಿತ್ ಬನ್ನೂರು ಸ್ವಾಗತಿಸಿದರು. ಜನಾರ್ಧನ ಪದೇಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಉಪನ್ಯಾಸಕಿ ಕು. ಬೇಬಿ ವಿದ್ಯಾ ಪಿ ಬಿ ನಿರೂಪಿಸಿದರು. ಶ್ರೀ ಮಹೇಶ್ ಕುಮಾರ್ ಮೇನಾಲ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀ ಅಜಿತ್ ರವರ ಮಾತೃಶ್ರೀ ವಿಶಾಲಾಕ್ಷಿ ಯಶವಂತ್, ನಿರ್ದೇಶಕಿ ಪ್ರಜ್ಞಾ ಎಸ್ ಎನ್, ಗಣ್ಯರು,ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.